ಮೈಸೂರು ಮೇಯರ್, ಉಪಮೇಯರ್ ಚುನಾವಣೆ: ಪ್ರತ್ಯೇಕ ಸ್ಪರ್ಧೆಗೆ ಬಿಜೆಪಿ ನಿರ್ಧಾರ.

ಮೈಸೂರು,ಸೆಪ್ಟಂಬರ್,3,2022(www.justkannada.in): ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಗೆ ದಿನ ಗಣನೆ ಆರಂಭವಾಗಿದ್ದು, ಅಧಿಕಾರದ ಗದ್ದುಗೆ ಏರಲು ಲೋಕಲ್ ಪಾಲಿಟಿಕ್ಸ್ ಚುರುಕುಗೊಂಡಿದೆ. ಈ ಮಧ್ಯೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳದೇ ಪ್ರತ್ಯೇಕವಾಗಿ ಸ್ಪರ್ಧಿಸಲು ಬಿಜೆಪಿ ನಿರ್ಧರಿಸಿದೆ.

ಈ ಸಂಬಂಧ ಬಿಜೆಪಿ ಮುಖಂಡರು ನಗರದ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿ ಚರ್ಚಿಸಿದ್ದಾರೆ. ಸಭೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ , ಮೈಸೂರು ಉಸ್ತುವಾರಿ ನಿರ್ಮಲ್ ಕುಮಾರ್ ಸುರಾನ, ಸ್ಥಳೀಯ ಬಿಜೆಪಿ ಶಾಸಕರು, ಪಾಲಿಕೆ ಸದಸ್ಯರು ನಿಗಮ ಮಂಡಳಿ ಸದಸ್ಯರು ಭಾಗಿಯಾಗಿದ್ದರು.

ಈ ಬಾರಿ ಮೈತ್ರಿ ಬೇಡ ಪ್ರತ್ಯೇಕವಾಗಿ ಸ್ಪರ್ಧೆ ಮಾಡೋಣ ಎಂದು ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಪಾಲಿಕೆಯಲ್ಲಿ ಬಿಜೆಪಿ 27 ಜನ ಸಂಖ್ಯಾಬಲ ಹೊಂದಿದ್ದು, ಮೇಯರ್ ಸ್ಥಾನಕ್ಕೆ 8 , ಉಪಮೇಯರ್ ಸ್ಥಾನಕ್ಕೆ 6 ಜನ ಆಕಾಂಕ್ಷಿಗಳು ಇದ್ದಾರೆ. ಅಂತಿಮವಾಗಿ ನಮ್ಮ ವರಿಷ್ಠರ ಜೊತೆ ಸೆಪ್ಟೆಂಬರ್ 5  ರಂದು  ಸಭೆ ನಡೆಸಿ ಚರ್ಚೆ ಮಾಡಿ ಸೆಪ್ಟಂಬರ್ 6 ರಂದು ಅಂತಿಮ ಅಭ್ಯರ್ಥಿಗಳನ್ನು ಫೈನಲ್ ಮಾಡುತ್ತೇವೆ  ಎಂದು ಬಿಜೆಪಿ ನಗರ ಅಧ್ಯಕ್ಷ ಶ್ರೀವತ್ಸ ಹೇಳಿದರು.

Key words: Mysore-Mayor- Deputy Mayor –Elections- BJP – Separate- Contest.