ಮೈಸೂರು ದಸರಾ-2020: ಸರ್ಕಾರದಿಂದ ವಿಶೇಷ ಮಾರ್ಗಸೂಚಿ ರಿಲೀಸ್…

ಮೈಸೂರು,ಅಕ್ಟೋಬರ್,14,2020(www.justkannada.in): ಕೋವಿಡ್ ಹಿನ್ನೆಲೆ ಈ ಬಾರಿ  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲು ಸರ್ಕಾರ ಸಜ್ಜಾಗಿದ್ದು ಈ ನಡುವೆ ದಸರಾಗೆ ವಿಶೇಷ ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದೆ.

ಅಕ್ಟೋಬರ್ 17 ರಂದು ಚಾಮುಂಡಿಬೆಟ್ಟದಲ್ಲಿ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಯಾಗಲಿದ್ದು ಕಾರ್ಯಕ್ರಮಕ್ಕೆ 200 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ದಸರಾ ಆಚರಣೆ ಸಂಬಂಧ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯ ನಿಯಮಗಳು ಈ ಕೆಳಕಂಡಂತಿವೆ….

ದಸರಾ ಜಂಬೂ ಸವಾರಿ ವೇಳೆ 300 ಮಂದಿಗೆ ದಸರಾ ಉದ್ಘಾಟನೆ ವೇಳೆ 200 ಮಂದಿ ಮಾತ್ರ ಪಾಲ್ಗೊಳ್ಳಲು ಅವಕಾಶ.

ಅರಮನೆ ಆವರಣದಲ್ಲಿ 50 ಮಂದಿಗೆ ಮಾತ್ರ ಅವಕಾಶ. ಅರಮನೆಯಲ್ಲಿ 8 ದಿನಗಳು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಂದ ಗರಿಷ್ಠ 50 ಜನ ಮೀರದಂತೆ 2 ಗಂಟೆಗಳ ಕಾರ್ಯಕ್ರಮ ನೀಡುವುದು. ದಸರಾ ಸಮಾರಂಭದ ವೇಳೆ ಸಾರ್ವಜನಿಕರಿಗೆ ಪ್ರವೇಶವಿಲ್ಲ.

ಅರಮನೆಯ ಆವರಣದಲ್ಲಿ ನಡೆಸಲಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಮತ್ತು ಸ್ಯಾನಿಟೈಸರ್ ಗಳನ್ನು ಕಡ್ಡಾಯವಾಗಿ ಬಳಸಬೇಕು.

ಈ ಬಾರಿಯ ದಸರಾ ಹಬ್ಬ ಆಚರಣೆಯನ್ನು ದೃಶ್ಯ ಸಂವಹನ ಮೂಲಕ, ಸಾರ್ವಜನಿಕರು ವೀಕ್ಷಿಸಲು ಅವಕಾಶ ಮಾಡಬೇಕು. ಈ ಸಮಾರಂಭಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿದೆ.Mysore Dasara -2020-Special Guideline- Release -Government.

ದಸರಾ ಪ್ರಮುಖ ಆಕರ್ಷಣೆಗಳಲ್ಲೊಂದಾದ ದೀಪಾಲಂಕಾರ ಸಂಜೆ 7ರಿಂದ 10ಗಂಟೆವರೆಗೆ ಮಾತ್ರ ಇರಬೇಕು.   ಅರಮನೆಯ ಪ್ರತಿಯೊಬ್ಬ ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಮಾಡಿಸಬೇಕು. ದಸರಾ ಆಚರಣೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಕೋವಿಡ್ ತಪಾಸಣೆಗೆ ಒಳಪಡಬೇಕು ಜೊತೆಗೆ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ.

Key words: Mysore Dasara -2020-Special Guideline- Release -Government.