ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಮೈಸೂರು ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ….

kannada t-shirts

ಮೈಸೂರು,ಡಿಸೆಂಬರ್,29,2020(www.justkannada.in):  ಮೈಸೂರಿನಲ್ಲಿ ಕಟ್ಟಡ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಇಂದು ನಡೆದ ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭೆ ಇಂದು ನಡೆಯಿತು. ಇದು ಮೇಯರ್ ತಸ್ನಿಂ ಅವರ ಅವಧಿಯ ಕಡೆ ಕೌನ್ಸಿಲ್ ಸಭೆಯಾಗಿದ್ದು, ಸಭೆಯಲ್ಲಿ  ರಸ್ತೆ, ವೃತ್ತ, ಉದ್ಯಾನವನಗಳಿಗೆ ನಾಮಕರಣ, ಕಟ್ಟಡ ತ್ಯಾಜ್ಯ ಸಂಸ್ಕರಣೆ,  ಎಲ್ ಇಡಿ ಬೀದಿ ದೀಪ ಅಳವಡಿಕೆ, ಕುಡಿಯುವ ನೀರು, ರಸ್ತೆ ಅಭಿವೃದ್ಧಿ ಕಾಮಗಾರಿ ಕುರಿತು ಚರ್ಚೆ ಮಾಡಲಾಯಿತು.

ಕೌನ್ಸಿಲ್ ಸಭೆಯಲ್ಲಿ ಸುಧೀರ್ಘ ಚರ್ಚೆ ನಂತರ ಸುಸ್ಥಿರ ಟ್ರಸ್ಟ್ ಗೆ ಕಟ್ಟಡ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಯಿತು. ಐದು ವರ್ಷದ ಅವಧಿಗೆ ನೀಡಲು ಮೇಯರ್ ತಸ್ನೀಂ ಷರತ್ತುಬದ್ಧ ಅನುಮತಿ ನೀಡಿದರು.

ಕಟ್ಟಡ ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣಾ  ಘಟಕ ನಿರ್ಮಾಣ ವಿಚಾರ, ಟೆಂಡರ್ ಮೂಲಕವೇ ನಿಯಮಾನುಸಾರ ಕಾಮಗಾರಿ ನೀಡಿ. ಟೆಂಡರ್ ನಲ್ಲಿ ಇತರ ಕಂಪನಿಗಳೂ ಭಾಗಿಯಾಗಲಿ. ಟೆಂಡರ್ ಕರೆದೇ ಕಾಮಗಾರಿ ನೀಡಬೇಕು ಎಂಬುದು ತೀರ್ಮಾನ ಆಗಿತ್ತು. ಸುಸ್ಥಿರ ಟ್ರಸ್ಟ್ ಗೆ ಯಾಕೆ  ನೀಡಬೇಕು ಎಂದು ಪಾಲಿಕೆ ಸದಸ್ಯರು ಪ್ರಶ್ನಿಸಿದರು. ಹಾಗೆಯೇ  ನಗರ ಪಾಲಿಕೆ ಆದಾಯ ಬರಬೇಕು. ಯಾರು ಬರಲಿಲ್ಲ ಅಂದ್ರೆ ಸುಸ್ಥಿರ ಟ್ರಸ್ಟ್ ಗೆ ನೀಡಿ.ಪಾಲಿಕೆ ಎಂದರು.

ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಸಂಸದ ಪ್ರತಾಪ್ ಸಿಂಹ,  ಕಟ್ಟಡ ತ್ಯಾಜ್ಯ ಘಟಕ ಸ್ಥಾಪನೆ ಬಗ್ಗೆ ಪಾಲಿಕೆ ಗೆ ಮನವಿ ಮಾಡಿದ್ದೇ. ಮೇಯರ್ ರವರು ಇದ್ದಕ್ಕೆ ಅನುಮೋದನೆ ನೀಡಿದ್ದಾರೆ. ಇದು ಸಂತೋಷದ ವಿಚಾರವಾಗಿದೆ. ಸ್ವಚ್ಚ ಸರ್ವೇಕ್ಷಣೆ ಸಂದರ್ಭದಲ್ಲಿ ಮಾತ್ರ  ಸ್ವಚ್ಚತೆಯಿಂದ ಇರುವುದು ಆಲ್ಲ. ಡೆಮಾಲೀಷನ್ ಅದ ತ್ಯಾಜ್ಯ ಎಲ್ಲಿಗೆ ಹೋಗಬೇಕು. ಮುಡಾದಿಂದ ಏನು ನಡೆಯುತ್ತಿದೆ. ಕಾರ್ನರ್ ಸೈಟ್ ಗಳನ್ನು ಒಳಗಿನಿಂದ ಒಳಗೆ ಮಾರಾಟ ಮಾಡುವುದರಲ್ಲಿ ಬಿಸಿ ಇದಾರೆ ಎಂದು ಟೀಕಿಸಿದರು.

ರಿಂಗ್ ರೋಡ್ ಅಸುಪಾಸು ತಿಪ್ಪೆ ಆಗಿದೆ. ಮೈಸೂರು ನಗರಕ್ಕೆ ಘಟಕಕ್ಕೆ ಅವಕಾಶ ಇದೆ. ದಯವಿಟ್ಟು ಯಾರು ತಕರಾರು ಮಾಡಬೇಡಿ. ನಿಮ್ಮ ವಾರ್ಡ್ ನಲ್ಲಿ ಇರುವ ಕಸವನ್ನು ನಮ್ಮ ರಿಂಗ್ ರಸ್ತೆಗೆ ತಂದು ಹಾಕ್ತಾ ಇದೀರಾ ಎಂದು ಸಂಸದ ಪ್ರತಾಪ್ ಸಿಂಹ ಬೇಸರ ವ್ಯಕ್ತಪಡಿಸಿದರು.mysore-city-corporation-council-meeting-approves-construction-waste-treatment-plant

ಕಟ್ಟಡ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸದ್ಯಕ್ಕೆ ಅನುಮೋದನೆ ಕೊಡಿ. ಮುಂದೆ ಆದಾಯ ಕೊಡುವವರು ಯಾರಾದರೂ ಬಂದರೆ ಬೇರೆಯವರಿಗೆ ಕೊಡೋಣ.‌ ಚಿಕ್ಕ ವಿಷಯಕ್ಕೆ ತಕರಾರು ಮಾಡಬೇಡಿ. ನಿಮ್ಮ ವಾರ್ಡ್ ಕಟ್ಟಡ ತ್ಯಾಜ್ಯ ವಿಲೇವಾರಿ ಮಾಡಲು ನಿಮಗೆ ಸಾಧ್ಯವೇ? ದಯವಿಟ್ಟು ಒಪ್ಪಿಗೆ ಕೊಡಿ ಎಂದು ಸಭೆಯಲ್ಲಿ ಪ್ರತಾಪ್ ಸಿಂಹ ಮನವಿ ಮಾಡಿದರು.

ಇನ್ನು ಸಭೆಯಲ್ಲಿ ಉಪಮೇಯರ್ ಶ್ರೀಧರ್, ಹೆಚ್ವುವರಿ ಆಯುಕ್ತ ಶಶಿಕುಮಾರ್ ಹಾಗೂ ಪಾಲಿಕೆ ಸದಸ್ಯರು ಭಾಗಿಯಾಗಿದ್ದರು.

Key words: Mysore city corporation-Council-meeting- approves -construction – waste treatment plant

website developers in mysore