ಮೈಸೂರು ಮಹಾನಗರ ಪಾಲಿಕೆ ಬೈ ಎಲೆಕ್ಷನ್: ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು.

ಮೈಸೂರು,ಸೆಪ್ಟಂಬರ್,6,2021(www.justkannada.in):  ಮೈಸೂರು ಮಹಾನಗರ ಪಾಲಿಕೆ ವಾರ್ಡ್ ನಂ.36ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಜನಿ ಅಣ್ಣಯ್ಯ ಗೆಲುವು ಸಾಧಿಸಿದ್ದಾರೆ.

ಇಂದು ಮಹಾನಗರ ಪಾಲಿಕೆ ವಾರ್ಡ್ ನಂ.36ರ ಉಪಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ ರಜನಿ  ಅಣ್ಣಯ್ಯ 4,113 ಮತಗಳನ್ನ ಪಡೆಯುವ ಮೂಲಕ ಜಯಭೇರಿ ಬಾರಿಸಿದ್ದಾರೆ. ಇನ್ನು ಚುನಾವಣೆಯಲ್ಲಿ ಜೆಡಿಎಸ್ ಗೆ ಮುಖಭಂಗವಾಗಿದ್ದು, ಜೆಡಿಎಸ್ ನ ಅಭ್ಯರ್ಥಿ ಲೀಲಾವತಿಗೆ 2116 ಮತಗಳು ಬಿಜೆಪಿ ಅಭ್ಯರ್ಥಿ ಶೋಭಾ ಅವರಿಗೆ 601 ಮತಗಳು ಲಭಿಸಿವೆ.

ಮಾಜಿ ಮೇಯರ್ ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದಿನಿಂದಾಗಿ ವಾರ್ಡ್ ನಂ.36ಕ್ಕೆ  ಉಪಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯ ಸಾಧಿಸಿದ್ದು ಈ ಮೂಲಕ ಜೆಡಿಎಸ್ ಗೆ ಮುಖಭಂಗ ಆದಂತಾಗಿದೆ.

ENGLISH SUMMARY…

Cong. candidate wins Mysore City Corporation Byelections
Mysuru, September 6, 2021 (www.justkannada.in): Congress candidate Rajani Annaiah won the Mysore City Corporation Ward No. 36 by-election.
The result of the by-election held for MCC Ward No. 36 was announced today. Rajani Annaiah was announced as the winner. She secured 4,113 votes against JDS candidate Leelavathi, who got 2116 votes, and BJP candidate Shobha was able to garner only 601 votes.
The by-election for Ward No. 36 was held following the dismissal of former Mayor Rukmini Madegowda’s membership.
Keywords: MCC/ Ward No. 36/ byelection/ Cong. candidate/ win

Key words: Mysore- City –corporation-By Election-Congress candidate-win