ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಡಿಎಸ್ ಎಸ್ ಮುಖಂಡನ ಹತ್ಯೆ.

Promotion

ತುಮಕೂರು,ಜೂನ್,15,2022(www.justkannada.in): ದುಷ್ಕರ್ಮಿಗಳು ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಡಿಎಸ್ ಎಸ್ ಮುಖಂಡನನ್ನ ಹತ್ಯೆ  ಮಾಡಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನಲ್ಲಿ ನಡೆದಿದೆ.

 ಗುಬ್ಬಿ ಪಟ್ಟಣದ ಬಿ.ಎಸ್.ರಸ್ತೆಯಲ್ಲಿ  ಈ ಘಟನೆ ನಡೆದಿದೆ.  ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ  ಮುಖಂಡ ನರಸಿಂಹಮೂರ್ತಿ (50) ಹತ್ಯೆಯಾದವರು. ಹೆದ್ದಾರಿ ಪಕ್ಕದಲ್ಲೇ ಸ್ನೇಹಿತರ ಜತೆ ಚಹಾ ಕುಡಿಯುತ್ತ ಕುಳಿತಿದ್ದಾಗ ದಾಳಿ ಮಾಡಿ ಕೊಲೆ ಮಾಡಲಾಗಿದೆ. ಕಾರಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಪೊಲೀಸರು ಪರಿಶೀಲನೆ  ನಡೆಸಿದ್ದಾರೆ.

ಹಣದ ವಿಚಾರವಾಗಿ ಹಳೆ ದ್ವೇಷಕ್ಕೆ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಗುಬ್ಬಿ ಶಾಸಕ ಶ್ರೀನಿವಾಸ್​ ಬೆಂಬಲಿಗ ನರಸಿಂಹಮೂರ್ತಿ ಗುಬ್ಬಿ‌ ಪಟ್ಟಣದಲ್ಲಿ ದಲಿತ ಮುಖಂಡರಲ್ಲಿ ಹೆಸರು ಮಾಡಿದ್ದರು. ತುಮಕೂರು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಮೃತದೇಹ ರವಾನಿಸಲಾಗಿದೆ. ಶವಾಗಾರಕ್ಕೆ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್  ಭೇಟಿ ನೀಡಿದ್ದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

Key words: murder-tumakur- DSS-leader