ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕ್ಯೂಟ್ ಬೇಬಿ ಮತ್ತು ಲಕ್ಕಿ ಬೇಬಿ ಸ್ಪರ್ಧೆಯ ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಿದ ಸಂಸದ ಪ್ರತಾಪ್ ಸಿಂಹ.

kannada t-shirts

ಮೈಸೂರು,ಆಗಸ್ಟ್,26,2021(www.justkannada.in): ಪ್ರತಿ ವರ್ಷದಂತೆ ಈ ವರ್ಷವೂ ಸಹ ಕೃಷ್ಣಜನ್ಮಾಷ್ಟಮಿಯ ಅಂಗವಾಗಿ ಕೆ ಎಂ ಪ್ರವೀಣ್ ಕುಮಾರ್ ಚಾರಿಟಬಲ್ ಟ್ರಸ್ಟ್ ವತಿಯಿಂದ  30/08/2021 ರ ಸೋಮವಾರ ಕರ್ನಾಟಕ ವಸ್ತುಪ್ರದರ್ಶನ ಆವರಣದಲ್ಲಿ  ಕ್ಯೂಟ್ ಬೇಬಿ ಮತ್ತು ಲಕ್ಕಿ ಬೇಬಿ ಪಾರಂಪರಿಕ ವೇಷಭೂಷಣ ಸ್ಪರ್ಧೆಯನ್ನು ಏರ್ಪಡಿಸಿದ್ದು,  7ವರ್ಷ ಒಳಗಿನ  ಮಕ್ಕಳು ಭಾಗವಹಸಿಬಹುದಾಗಿದೆ, ಸ್ಪರ್ಧೆಯ ಪ್ರಚಾರ ಸಾಮಗ್ರಿಗಳನ್ನು ಸುತ್ತೂರು ಮಠದಲ್ಲಿ ಸಂಸದರಾದ ಪ್ರತಾಪಸಿಂಹ ರವರು ಬಿಡುಗಡೆ ಮಾಡಿದರು.

ಕೃಷ್ಣ ರುಕ್ಷ್ಮಿಣಿ ಸತ್ಯಭಾಮೆ ರಾಧೆ ವೇಷ ಧರಸಿ ಬಂದು ಸ್ಪರ್ಧೆಯಲ್ಲಿ ಭಾಗವಹಿಸಬಹುದು, ಕ್ಯೂಟ್ ಬೇಬಿ ನಿಮ್ಮ ಮಕ್ಕಳ ವೇಷಭೂಷಣದಲ್ಲಿ ಚೆಂದ ಕಂಡರೆ ತೀರ್ಪುಗಾರರ ತೀರ್ಪಿನ ಮೇಲೆ ಮೊದಲನೇ ಬಹುಮಾನ 2000ರೂಗಳು, ಎರಡನೇ ಬಹುಮಾನ 1000ರೂಗಳು, ಮೂರನೇ ಬಹುಮಾನ 500ರೂಗಳು ನಗದು ಹಾಗೂ ವಿಜೇತರಿಗೆ  ಪ್ರಶಸ್ತಿ ಫಲಕ ಹಾಗೂ ಪತ್ರ ನೀಡಲಾಗುವುದು,  ಸ್ಪರ್ಧಿಸುವ ಎಲ್ಲಾ ಮಕ್ಕಳ ಹೆಸರನ್ನು ಲಾಟರಿಯಲ್ಲಿ ಲಕ್ಕಿಡಿಪ್ ಮೂಲಕ ಲಕ್ಕಿಬೇಬಿ ಅದೃಷ್ಟಶಾಲಿ ಮಗುವಿಗೆ ಮೊದಲನೇ ಬಹುಮಾನ , ಎರಡನೆ ಬಹುಮಾನ ಹಾಗೂ ಮೂರನೇ ಬಹುಮಾನ ಪ್ರಶಸ್ತಿ ಫಲಕ ಹಾಗೂ ಪ್ರಮಾಣಪತ್ರ ನೀಡಲಾಗುವುದು , ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ನೆನಪಿನ ಕಾಣಿಕೆ ಮತ್ತು ಪ್ರಮಾಣಪತ್ರ ನೀಡಲಾಗುವುದು,  28/08/2021 ನೊಂದಾಯಿಸಲು ಕಡೆಯ ದಿನಾಂಕವಾಗಿದ್ದು ಆಸಕ್ತರು ನೋಂದಾಯಿಸಿಕೊಳ್ಳಲು 9880752727 ಈ ನಂಬರ್ ಗೆ ವಾಟ್ಸಪ್ ಮೂಲಕ ಮಗುವಿನ ಭಾವಚಿತ್ರ ,ವಿಳಾಸ ,ವಯಸ್ಸು, ಮಾಹಿತಿ ಕಲಿಸಿಕೊಡುವ ಮೂಲಕ ನೋಂದಾಯಿಸಿ ಕೊಳ್ಳಬಹುದಾಗಿದೆ.

ಸಂಸದರಾದ ಪ್ರತಾಪ್ ಸಿಂಹ ಬಿಡುಗಡೆಗೊಳಿಸಿ ಕಾರ್ಯಕ್ರಮ ಯಶಸ್ವಿಯಾಗಲಿ  ಎಂದು ಶುಭ ಕೋರಿದರು. ನಂತರ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ಮಾತನಾಡಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳಲ್ಲಿ ಸ್ಪರ್ಧೆ ಆತ್ಮವಿಶ್ವಾಸ ಭಾವನೆ ಬೆಳೆಸುವ ಜತೆಗೆ ಭಾರತೀಯ ಸಂಸ್ಕೃತಿ ಸಂಸ್ಕಾರವನ್ನು ಪರಿಚಯಿಸುವ ಈ ವಿಶಿಷ್ಟ ಕಾರ್ಯಕ್ರಮಕೆ ಹೆಚ್ಚು ಮಕ್ಕಳು ಸ್ಪರ್ಧೆಗೆ ಭಾಗಿಯಾಗುವ ಮೂಲಕ ಕೊರೋನಾ ಕತ್ತಲಿನಲ್ಲಿ ಸ್ಪರ್ಧೆ ಮೂಲಕ ಮಕ್ಕಳಿಗೆ‌ ಬೆಳಕು ಚೆಲ್ಲಲಿ ಎಂದು ಹೇಳಿದರು.

ಪ್ರಚಾರ ಸಾಮಗ್ರಿಗಳನ್ನು ಉದ್ಘಾಟಿಸಿದ ಸಂಸದರಾದ ಪ್ರತಾಪ್ ಸಿಂಹ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ,‌ ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಾದ ಎಲ್ ಆರ್ ಮಹದೇವಸ್ವಾಮಿ ,ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್ ,ಬಿಜೆಪಿ ಮುಖಂಡರಾದ ಪರಮೇಶ್ ಗೌಡ ,ಲೋಹಿತ್ ,ಮಹೇಂದ್ರ ಶೈವ ,ನಾಣಿಗೌಡ ,ಸುಚೇಂದ್ರ , ಬೆಳಕು ಮಂಜು ,ಹಾಗೂ ಇನ್ನಿತರರು ಹಾಜರಿದ್ದರು.

Key words: MP- Pratap Sinha- released – promotional material – ‘Cute Baby’ -‘Lucky Baby-Krishna Janmashtami.

website developers in mysore