ಜಂಬೂಸವಾರಿ ತೆರಳುವ ರಾಜಮಾರ್ಗದಲ್ಲಿ  ಹೆಜ್ಜೆಯಿಟ್ಟ ಸಚಿವ ವಿ.ಸೋಮಣ್ಣ: ಸಮಸ್ಯೆಗಳನ್ನಾಲಿಸಿ ಅಧಿಕಾರಿಗಳಿಗೆ ಸೂಚನೆ…

ಮೈಸೂರು,ಆ,31,2019(www.justkannada.in): ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತಾ ಕಾರ್ಯಗಳು ನಡೆಯುತ್ತಿದ್ದು ಈ ನಡುವೆ ಉಸ್ತುವಾರಿ ಸಚಿವ ವಿ. ಸೋಮಣ್ಣ ಇಂದು ಬೆಳ್ಳಂ ಬೆಳಗ್ಗೆಯೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಿಟಿ ರೌಂಡ್ಸ್ ಹಾಕಿ ಸಮಸ್ಯೆಗಳನ್ನಾಲಿಸಿದರು.

ಬೆಳಗ್ಗೆ 6ಗಂಟೆಯಿಂದಲೇ ಕೆಲಸಕ್ಕಿಳಿದ ಸಚಿವ  ವಿ. ಸೋಮಣ್ಣ. ಜಂಬೂಸವಾರಿ ತೆರಳುವ ಮಾರ್ಗದಲ್ಲಿ ಹೆಜ್ಜೆ ಹಾಕಿ ಸಮಸ್ಯೆಗಳ ಕಡೆ ಗಮನ ಹರಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಕೋಟೆ ಆಂಜನೇಯ ದೇವಸ್ಥಾನದಿಂದ  ಬನ್ನಿಮಂಟಪದ ವರೆಗೂ ನಡಿಗೆ ಮೂಲಕ ಸಾಗಿ ಸಮಸ್ಯೆ ಆಲಿಸಿದ ಸಚಿವ ವಿ. ಸೋಮಣ್ಣ ಅವರಿಗೆ  ಸಂಸದ ಪ್ರತಾಪ್ ಸಿಂಹ,  ಶಾಸಕ ಎಲ್. ನಾಗೇಂದ್ರ  ಮೇಯರ್ ಪುಷ್ಪಲತಾ ಜಗನ್ನಾಥ್,  ಉಪ ಮೇಯರ್ ಅಹಮ್ಮದ್ ಶಫಿ. ವಿವಿಧ ಇಲಾಖೆಗಳ  ಅಧಿಕಾರಿಗಳು ಸಾಥ್ ನೀಡಿದರು.

ರಾಜಮಾರ್ಗದಲ್ಲಿ  ಜಂಬುಸವಾರಿ ಸುಗಮವಾಗಿ ತೆರಳಲು ಫುಟ್ಪಾತ್, ರಸ್ತೆ ಸಂಚಾರ,  ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಗಮನಹರಿಸಿ ಇವುಗಳನ್ನ ಬಗೆ ಹರಿಸುವಂತೆ ಸ್ಥಳದಲ್ಲೇ  ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಜಂಬೂಸವಾರಿ ಸಾಗುವಾಗ ಯಾವುದೇ  ತೊಂದರೇ ಆಗಬಾರದದು. ಹೀಗಾಗಿ  ಒಣ ರಂಬೆಗಳನ್ನ ಕಟಾವು ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಬಗ್ಗೆ ಮಾತನಾಡಿದ ಸಚಿವ ವಿ.ಸೋಮಣ್ಣ, ಸ್ಥಳಕ್ಕೆ ಖುದ್ದಾಗಿ  ಭೇಟಿ ನೀಡಿದಾಗ ಇರುವ ಸಮಸ್ಯೆ ಗೊತ್ತಾಗಲಿದೆ, ಹೀಗಾಗಿ  ನಾಲ್ಕು ಕಿ.ಮೀ ದೂರ ನಡಿಗೆ ಮಾಡುತ್ತಿದ್ದೇವೆ. ನಾಡ ಹಬ್ಬ ದಸರಾಗೆ ಕಪ್ಪು ಚುಕ್ಕೆ ಬಾರದ ಹಾಗೆ ನಡೆದುಕೊಳ್ಳಲಾಗುವುದು ಎಂದರು.

ರಾಜಮಾರ್ಗ ವೀಕ್ಷಣೆ  ವೇಳೆ  ಆಂಬುಲೆನ್ಸ್ ಗೆ  ದಾರಿ ಮಾಡಿಕೊಟ್ಟ ಸಚಿವ ವಿ.ಸೋಮಣ್ಣ…

ಜಂಬುಸವಾರಿ ತೆರಳುವ ಮಾರ್ಗದಲ್ಲಿ ರಸ್ತೆ ಸಂಚಾರ  ಕೆಲ ಕಾಲ ಬಂದ್ ಮಾಡಲಾಗಿತ್ತು. ಈ ವೇಳೆ ಜನದಟ್ಟಣೆ ಇದ್ದಾಗ  ಕೆ. ಆರ್ ಆಸ್ಪತ್ರೆಗೆ ತೆರಳುತ್ತಿದ್ದ ಆಂಬುಲೆನ್ಸ್ ಗೆ ಸಚಿವ ವಿ.ಸೋಮಣ್ಣ ದಾರಿ ಮಾಡಿಕೊಟ್ಟರು. ಆಂಬುಲೆನ್ಸ್ ಸೈರನ್ ಸದ್ದು ಕೇಳುತ್ತಿದ್ದಂತೆ ಸಚಿವರೇ ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟು ಹಾದಿ ಸುಗಮ ಗೊಳಿಸಿದರು.

Key words: Minister- V. Somanna, – rajamarga- instructed -officers – issues.