“ಮೇಯರ್ ಆಗಿ ಸಾಧನೆಯ ಕೆಲಸ ಏನು ಮಾಡಲಾಗಲಿಲ್ಲ : ಮೇಯರ್ ತಸ್ನಿಂ ಬೇಸರ…”

kannada t-shirts

ಮೈಸೂರು,ಜನವರಿ,22,2021(www.justkannada.in) : ಮೈಸೂರು ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಒಬ್ಬ ಮುಸ್ಲಿಂ ಮಹಿಳೆ ಮೇಯರ್ ಆಗಿದ್ದು, ಆದರೆ, ಕೊರೊನ ಹಾಗೂ ಲಾಕ್ ಡೌನ್ ಹಿನ್ನೆಲೆ ಮೇಯರ್ ಆಗಿ ದೊಡ್ಡ ಸಾಧನೆಯ ಕೆಲಸ ಏನು ಮಾಡಲಾಗಲಿಲ್ಲ ಎಂದು ಮೇಯರ್ ತಸ್ನಿಂ ವಿಷಾದವ್ಯಕ್ತಪಡಿಸಿದ್ದಾರೆ.jk

ಮೇಯರ್ ಅವಧಿ ಮುಕ್ತಾಯ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದಿಂದ ಸೂಕ್ತ ಅನುದಾನ ಸಿಗಲಿಲ್ಲ, ಕೇವಲ ಮೂರ್ನಾಲ್ಕು ತಿಂಗಳುಗಳಷ್ಟೇ ಅಧಿಕಾರ ನಡೆಸಿದೆ. ನನಗೆ ಸಿಕ್ಕ ಕೇವಲ 4ತಿಂಗಳ ಅವಧಿಯಲ್ಲಿ ತೃಪ್ತಿದಾಯಕ ಆಡಳಿತ ಮಾಡಿದ್ದೇನೆ ಎಂದಿದ್ದಾರೆ.

ಯಾವುದೇ ಅಭಿವೃದ್ಧಿ ಕೆಲಸಕ್ಕೆ ಅನುದಾನ ಮುಖ್ಯ. ಆದರೆ, ನನಗೆ ಸರ್ಕಾರದಿಂದ ಯಾವುದೇ ಅನುದಾನ ಸಿಗಲಿಲ್ಲ. ಸಿಕ್ಕಿರುವ ಈ ಮೂರ್ನಾಲ್ಕು ತಿಂಗಳ ಅವಧಿಯ ಅವಕಾಶದಲ್ಲಿ ಸಾಧ್ಯವಾದಷ್ಟು ಉತ್ತಮ ಕೆಲಸ ಮಾಡಿದ್ದೇನೆ ತಿಳಿಸಿದ್ದಾರೆ.

ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮುರಿಯೋದಿಲ್ಲ

ಪಾಲಿಕೆ ಮೈತ್ರಿ ಕುರಿತು ಉಪಮೇಯರ್ ಶ್ರೀಧರ್ ಮಾತನಾಡಿ, ಜೆಡಿಎಸ್ ಗೆ ಉತ್ತಮ ಬೆಂಬಲ ನೀಡಿದ್ದೇವೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮುರಿಯೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಮ್ಮ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಲಿಲ್ಲ. ಬದಲಾಗಿ ಮೇಯರ್ ಹಾಗೂ ನನ್ನಿಂದ ಜನರ ಸೇವೆ ಚೆನ್ನಾಗಿ ಆಗಿದೆ. ಕೊರೊನ ಸಂದರ್ಭದಲ್ಲಿ ಜನ ಸೇವೆ ಅಗತ್ಯವಾಗಿತ್ತು. ಅದನ್ನು ಮಾಡಿದ್ದೇವೆ ಎಂದಿದ್ದಾರೆ.

mayor,achievement,Work,What,Could not,Mayor,Tasnim,Regret 

ಈ ಅವಧಿಯಲ್ಲಿ ಜೆಡಿಎಸ್ ಗೆ ಉತ್ತಮವಾಗಿ ಬೆಂಬಲ ನೀಡಿದ್ದೇವೆ. ಈ ಬಾರಿಯೂ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಇರಲಿದೆ. ಜೆಡಿಎಸ್ ನಲ್ಲಿ 5 ಮಂದಿ ಮುಸ್ಲಿಂ ಸದಸ್ಯರಿದ್ದಾರೆ ಅವರು ಬಿಜೆಪಿ ಜೊತೆ ಕೈಜೋಡಿಸಲು ಒಪ್ಪುವುದಿಲ್ಲ. ಹೀಗಾಗಿ, ಜೆಡಿಎಸ್ ಮುಂದಿನ ಅವಧಿಗೂ ನಮಗೆ ಬೆಂಬಲ ನೀಡಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ.

 key words : mayor-achievement-Work-What-Could not-Mayor-Tasnim-Regret 

website developers in mysore