ಸೌರವ್ ಗಂಗೂಲಿ ಪರ ಬ್ಯಾಟ್ ಬೀಸಿದ ಮಮತಾ ಬ್ಯಾನರ್ಜಿ

Promotion

ಬೆಂಗಳೂರು, ಅಕ್ಟೋಬರ್ 21, 2022 (www.justkannada.in): ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಸೌರವ್ ‍ಗಂಗೂಲಿ ಪರ ಬ್ಯಾಟ್ ಬೀಸಿದ್ದಾರೆ.

ಸೌರವ್ ಗಂಗೂಲಿ ಅವರನ್ನು ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡದೆ ವಂಚಿಸಿದ್ದಾರೆ ಎಂದು ಮಮತಾ ಬ್ಯಾನರ್ಜಿ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರಕಾರದ ಮೇಲೆ ಕಿಡಿ ಕಾರಿರುವ ದೀದಿ ಇದು ನಾಚಿಕೆಯಿಲ್ಲದ ರಾಜಕೀಯ ಸೇಡು ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಸಚಿನ್ ತೆಂಡೂಲ್ಕರ್ ಅಥವಾ ಮೊಹಮ್ಮದ್ ಅಜರುದ್ದೀನ್ ಅವರಂತಹ ಮಾಸ್ಟರ್ ಕ್ರಿಕೆಟಿಗರು ಇದೇ ರೀತಿ ವಂಚಿತರಾಗಿದ್ದರೂ ಸಹ ತಾನು ಈ ವಿಷಯದ ಬಗ್ಗೆ ಮಾತನಾಡುತ್ತಿದ್ದೆ ಎಂದು ಬ್ಯಾನರ್ಜಿ ಹೇಳಿದ್ದಾರೆ.