ಬಡ ಬಾಲಕಿ ಶಾಲಾ ಫೀಸು ಕಟ್ಟಲು ನೆರವಾದ ಕಿಚ್ಚ ಸುದೀಪ್

Promotion

ಬೆಂಗಳೂರು, ಜೂನ್ 13, 2020 (www.justkannada.in): ಬಡ ಹೆಣ್ಣು ಮಗುವಿನ ಶಿಕ್ಷಣಕ್ಕೆ ಕಿಚ್ಚ ಸುದೀಪ್ ನೆರವಾಗಿದ್ದಾರೆ.

ಬೆಂಗೂರಿನ ನಾಗದೇವನಹಳ್ಳಿಯ ನಿವಾಸಿ ಆರನೇ ತರಗತಿ ಓದುತ್ತಿರುವ ಕನಿಶಾ ಗೆ ಶಾಲೆಯ ಫೀಸು ತುಂಬಲು ಕಷ್ಟವಾಗಿತ್ತು. ಈಕೆ ನೆರವಿಗೆ ನಟ ಸುದೀಪ್ ಧಾವಿಸಿದ್ದಾರೆ.

ಅಪ್ಪನಿಲ್ಲದೆ ತಾಯಿಯ ಆರೈಕೆಯಿಂದ ಬೆಳೆಯುತ್ತಿರುವ ಕನಿಶಾ ಸಂದೀಪಿನ ಶಾಲೆಯಲ್ಲಿ ಕಲಿಯುತ್ತಿದ್ದರು. ಆದರೆ ಲಾಕ್‌ಡೌನ್‌ನಿಂದಾಗಿ ತಾಯಿಗೆ ಸೂಕ್ತ ಸಮಯದಲ್ಲಿ ಹಣ ದೊರಕದೆ ಶಾಲೆಯ ಫೀಸು ಕಟ್ಟುವುದು ಕಷ್ಟವಾಗಿತ್ತು.

ಈ ವೇಳೆ ಆಗ ಕನಿಶಾ ತಾಯಿ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಮೊರೆ ಹೋದರು. ಕೂಡಲೇ ಸ್ಪಂದಿಸಿದ ಸುದೀಪ್ ಮತ್ತು ಟ್ರಸ್ಟ್ ಮಗುವಿನ ಫೀಸು ತುಂಬಲು ಹಣ ನೀಡಿದೆ.