ನಟ ರಮೇಶ್ ಅರವಿಂದ್’ಗೆ ಕೋಟ ಕಾರಂತ ಹುಟ್ಟೂರು ಪ್ರಶಸ್ತಿ

Promotion

ಬೆಂಗಳೂರು, ಸೆಪ್ಟೆಂಬರ್ 24, 2022 (www.justkannada.in): ಕೋಟ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನ ಈ ಪ್ರಶಸ್ತಿಗೆ ನಟ ರಮೇಶ್​ ಅರವಿಂದ್ ಪಾತ್ರರಾಗಿದ್ದಾರೆ.

ಸಮಾಜಕ್ಕೆ ಅವರ ಕೊಡಗೆಯನ್ನು ಪರಿಗಣಿಸಿ ಈ ಸಾಲಿನ ‘ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ’ಯನ್ನು ಅವರಿಗೆ ನೀಡಲು ನಿರ್ಧರಿಸಲಾಗಿದೆ.

ಕೋಟತಟ್ಟು ಗ್ರಾಮ ಪಂಚಾಯಿತಿ ಮತ್ತು ಕೋಟ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನ ಈ ಪ್ರಶಸ್ತಿಯನ್ನು ಈ ಬಾರಿ ರಮೇಶ್​ ಅರವಿಂದ್​ಗೆ ನೀಡುವ ಬಗ್ಗೆ ಘೋಷಿಸಿದೆ.

ಕಳೆದ 17 ವರ್ಷಗಳಿಂದ ಸಮಾಜದ ವಿವಿಧ ಗಣ್ಯರಿಗೆ ಈ ಪ್ರಶಸ್ತಿಯನ್ನು ನೀಡುತ್ತಾ ಬರಲಾಗುತ್ತಿದೆ. ಈ ಬಾರಿ ರಮೇಶ್ ಅರವಿಂದ್​ ಅವರು ಪ್ರಶಸ್ತಿ ಭಾಜನರಾಗಿದ್ದಾರೆ.