ಇಂದು ಬೆಂಗಳೂರಲ್ಲಿ ಪುಟ್ಟಣ್ಣ ಕಣಗಾಲ್ ಸ್ಮರಣಾರ್ಥ ಸಂಗೀತ ಸಂಜೆ

kannada t-shirts

ಬೆಂಗಳೂರು, ಮೇ, 18, 2019 (www.justkannada.in): ಪುಟ್ಟಣ್ಣ ಕಣಗಾಲ್ ಸ್ಮರಣಾರ್ಥ ಬೆಂಗಳೂರಿನ ಪ್ರೇಮಚಂದ್ರ ಸಾಗರ ಸಭಾಂಗಣದಲ್ಲಿ ಇಂದು ಅವರು ನಿರ್ದೇಶಿಸಿದ ಸಿನಿಮಾ ಹಾಡುಗಳ ಸಂಗೀತ ಸಂಜೆಯನ್ನು ಏರ್ಪಡಿಸಲಾಗಿದೆ.

ಕನ್ನಡ ಚಿತ್ರರಂಗದ ಸೂಪರ್ ಹಿಟ್ ನಿರ್ದೇಶಕ ಎಂದೇ ಖ್ಯಾತರಾಗಿರುವ ಪುಟ್ಟಣ್ಣ ಕಣಗಾಲ್ ಅವರು ನಮ್ಮನ್ನಗಲಿ ಜೂನ್ 5 ಕ್ಕೆ ಬರೋಬ್ಬರಿ ಮೂವತ್ನಾಲ್ಕು ವರ್ಷಗಳು ತುಂಬಲಿದೆ. ಕಣಗಾಲ್ ಸ್ಮರಣಾರ್ಥ ರಾಜ್ಯದ ನಾನಾ ಕಡೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯ ಕರಿಸುಬ್ಬು ಅಧ್ಯಕ್ಷತೆಯಲ್ಲಿ ‘ಮೂಕ ಹಕ್ಕಿಯು ಹಾಡುತಿದೆ’ ಸಂಗೀತ ಸಂಜೆಯನ್ನು ಸಂಜೆ 6 ಗಂಟೆಗೆ ಏರ್ಪಡಿಸಲಾಗಿದೆ. ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳಲ್ಲಿ ನಟಿಸಿದ ಏಳು ಜನ ಹೆಸರಾಂತ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

website developers in mysore