ರಂಗದ ಮೇಲೆ ಹಾಸ್ಯ ಚಕ್ರವರ್ತಿ ನರಸಿಂಹ ರಾಜು ಬದುಕು ಅನಾವರಣ

ಬೆಂಗಳೂರು, ಜುಲೈ 24, 2019 (www.justkannada.in): ಹಾಸ್ಯ ಚಕ್ರವರ್ತಿ ನರಸಿಂಹ ರಾಜು ಜೀವನ ಚರಿತ್ರೆಯನ್ನು ನಾಟಕದ ರೂಪದಲ್ಲಿ ಪ್ರಸ್ತುತ ಪಡಿಸಲು ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ಇಂದು (ಜು.24) ನರಸಿಂಹರಾಜು ಜನ್ಮದಿನ, ಹೀಗಾಗಿ ಅವರ ಹುಟ್ಟುಹಬ್ಬ ಆಚರಿಸುವುದರ ಜತೆಗೆ ನಾಟಕದ ಕೆಲಸಗಳಿಗೆ ಚಾಲನೆ ಸಿಗಲಿದೆ.

ಈಗಾಗಲೇ ಈ ನಾಟಕದ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ನರಸಿಂಹ ರಾಜು ಪಾತ್ರಕ್ಕೆ ಲಕ್ಷ್ಮಣ್ ಪೂಜಾರಿ ಎಂಬುವವರು ಬಣ್ಣ ಹಚ್ಚಲಿದ್ದಾರೆ.