ಭಾರತ-ನ್ಯೂಜಿಲ್ಯಾಂಡ್ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ.

kannada t-shirts

ಕಾನ್ಪುರ,ನವೆಂಬರ್,29,2021(www.justkannada.in):  ಕಾನ್ಪುರದಲ್ಲಿ ನಡೆದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.

ಈ ಟೆಸ್ಟ್ ನಲ್ಲಿ ಟೀಮ್ ಇಂಡಿಯಾಗೆ ಗೆಲ್ಲುವ ಉತ್ತಮ ಅವಕಾಶ ಹೆಚ್ಚಿತ್ತು. ಆದರೆನ್ಯೂಜಿಲೆಂಡ್ ಅತ್ಯುತ್ತಮ ಡಿಫೆನ್ಸ್ ಪ್ರದರ್ಶಿಸುವ ಮೂಲಕ ಕಾನ್ಪುರ ಟೆಸ್ಟ್ ಅನ್ನು ಡ್ರಾ ಮಾಡಿಕೊಂಡಿದೆ. ಕಾನ್ಪುರ ಟೆಸ್ಟ್‌ ನಲ್ಲಿ ಆದರೆ ಅದರ ಗೆಲುವಿಗೆ ಒಂದು ವಿಕೆಟ್ ಅಡ್ಡಿಪಡಿಸಿತು. ಎಜಾಜ್ ಪಟೇಲ್ ಮತ್ತು ರಚಿನ್ ರವೀಂದ್ರ ತಂಡ 54 ಎಸೆತಗಳಿಗೆ ವಿಕೆಟ್‌ನಲ್ಲಿ ನಿಂತು ಟೀಂ ಇಂಡಿಯಾ ಗೆಲುವನ್ನು ತಪ್ಪಿಸಿದರು. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 345 ರನ್ ಗಳಿಗೆ ಆಲ್ ಔಟ್ ಆಯಿತು ಮೊದಲ ಇನ್ನಿಂಗ್ಸ್ ನಲ್ಲಿ ಶುಭ್ಮನ್ ಗಿಲ್ 52 ಹಾಗೂ ಶ್ರೇಯಸ್ ಅಯ್ಯರ್ 103 ರನ್ ಭಾರಿಸಿ ಶತಕ ಸಿಡಿಸಿದರು.  ನ್ಯೂಜಿಲ್ಯಾಂಡ್ ಪರ ಟೀಮ್ ಸೌಥಿ ಅತ್ಯುತ್ತಮ ಬೌಲಿಂಗ್ ಮಾಡಿ 5 ವಿಕೆಟ್ ಪಡೆದರು.

ನ್ಯೂಜಿಲ್ಯಾಂಡ್ ಮೊದಲ ಇನ್ನಿಂಗ್ಸ್ ನಲ್ಲಿ 296 ರನ್ ಗಳಿಗೆ ಆಲ್ ಔಟ್ ಆಗಿ ಭಾರತ 49 ರನ್ ಮುನ್ನಡೆ ಸಾಧಿಸಿತ್ತು. ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ 234 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡು ನ್ಯೂಜಿಲ್ಯಾಂಡ್ ಗೆ ಗೆಲ್ಲಲು 284 ರನ್ ಗಳ ಗುರಿ ನೀಡಿತು. 2ನೇ ಇನ್ನಿಂಗ್ ಆರಂಭಿಸಿದ ನ್ಯೂಜಿಲ್ಯಾಂಡ್ ಕೊನೆಯ ದಿನದಾಟದಲ್ಲಿ ಒಂದು ವಿಕೆಟ್ ಉಳಿಸಿಕೊಂಡು ಪಂದ್ಯವನ್ನ ಡ್ರಾನಲ್ಲಿ ಅಂತ್ಯ ಮಾಡಿಕೊಂಡಿತು.

Key words: India-New Zealand -end – first Test- match

website developers in mysore