ನಾಮಪತ್ರ  ಹಿಂಪಡೆಯಲು ನಾನು ಯಾರಿಂದಲೂ ನಯಾಪೈಸೆ ಪಡೆದಿಲ್ಲ- ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸಂಸದ ಮುದ್ದಹನುಮೇಗೌಡ ಸ್ಪಷ್ಟನೆ…

ದಕ್ಷಿಣ ಕನ್ನಡ,ಮೇ,2,2019(www.justkannada.in): ತಮ್ಮ ವಿರುದ್ದ  ನಾಮಪತ್ರ ವಾಪಸ್  ಪಡೆಯಲು ಕೋಟಿ ಡೀಲ್ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ, ನಾನು ನಾಮಪತ್ರ ಹಿಂಪಡೆಯಲು ಯಾರಿಂದಲೂ ನಯಾಪೈಸೆ ಪಡೆದಿಲ್ಲ ಎಂದು  ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸಂಸದ ಮುದ್ದಹನುಮೇಗೌಡ ಆಣೆ ಪ್ರಮಾಣ ಮಾಡಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಂಸದ ಮುದ್ದಹನುಮೇಗೌಡ, ನಾನು ಕಾಂಗ್ರೆಸ್ ಮೂಲದವ, ಕಾಂಗ್ರೆಸ್ಸಿಗ. ಲೋಕಸಭೆ ಚುನಾವಣೆ ಮತದಾನ ಮುಗಿದ ಬಳಿಕ ಒಂದು ಆಡಿಯೋ ಸಂಭಾಷಣೆ ರೀಲೀಸ್ ಆಗಿದೆ. ನಾಮಪತ್ರ ವಾಪಸ್ ಪಡೆಯಲು ಕೋಟಿ ಕೋಟಿ ಡೀಲ್ ನಡೆದಿದೆ ಎಂಬ ಬಗ್ಗೆ ಚರ್ಚೆಯಾಗಿದೆ. ನನ್ನ ವಿರುದ್ದ ವಿಕೃತ ಮನಸ್ಸಿನವರಿಂದ ತಪ್ಪು ಸಂದೇಶ ರವಾನೆಯಾಗಿದೆ. ಆಡಿಯೋ ಸೃಷ್ಟಿ ಹಿಂದೆ ಕಾಣದ ಕೈಗಳು ಇವೆ. ಇದರಿಂದ ನನಗೆ ತುಂಬಾ ನೋವಾಗಿದೆ.  ವಿಕೃತ ಮನಸ್ಸಿನವರಿಗೆ ದೇವರು ಒಳ್ಳೆಯ ಬುದ್ದಿ ನೀಡಲಿ. ಸತ್ಯ ಹೇಳುವ ದೃಷ್ಟಿಯಿಂದ ನಾನು ಧರ್ಮಸ್ಥಳಕ್ಕೆ ಬಂದೆ. ಆಡಿಯೋ ಆರೋಪದ ಹಿಂದೆ ದುರುದ್ದೇಶ ಇದೆ. ಧರ್ಮಸ್ಥಳ ಮಂಜುನಾಥೇಶ್ವರ ಸನ್ನಿಧಿಯಲ್ಲಿ ಸತ್ಯ ಹೇಳಿದ್ದೇನೆ. ನಾಮಪತ್ರ ವಾಪಸ್ ಪಡೆಯಲು ಯಾರಿಂದ ನಯಾಪೈಸೆ ಪಡೆದಿಲ್ಲ. ನನ್ನ ಮೇಲಿನ ಆರೋಪ ಸುಳ್ಳು. ದೇವರ ದರ್ಶನ ಪಡೆದು ಈ ಮಾತು ಹೇಳುತ್ತಿದ್ದೇನೆ. ರಾಜ್ಯದ ಜನತೆಗೆ ಈ ಮೂಲಕ ಸ್ಪಷ್ಟನೆ ಕೊಡುತ್ತಿದ್ದೇನೆ ಎಂದು ಧರ್ಮಸ್ಥಳದಲ್ಲಿ ಸಂಸದ ಮುದ್ದೆಹನುಮೇಗೌಡ ಸ್ಪಷ್ಟನೆ ನೀಡಿದರು.

ಇನ್ನು ತುಮಕೂರಿನಲ್ಲಿ ನಾನು ನಿರೀಕ್ಷೆಗೆ ಮೀರಿ ಅಭಿವೃದ್ದಿ ಕಾರ್ಯ ಮಾಡಿದ್ದೇನೆ. ಆದರೆ 2019ರಲ್ಲಿ ನನಗೆ ಮತ್ತೆ ಅವಕಾಶ ಸಿಗಲಿಲ್ಲ ಕ್ರೀಯಾಶೀಲನಾಗಿ ಕಾರ್ಯ ಮಾಡಿದ್ದರೂ ಸಿಗಲಿಲ್ಲ.  ತುಮಕೂರು ಜೆಡಿಎಸ್ ಗೆ ಬಿಟ್ಟುಕೊಟ್ಟರು. ಆದರೂ ನಾನು ನಾಮಪತ್ರ ಸಲ್ಲಿಸಿದ್ದೆ. ಮೈತ್ರಿ ಅನಿವಾರ್ಯಾತೆ ಬಗ್ಗೆ ವೇಣುಗೋಪಾಲ್, ರಾಹುಲ್ ಗಾಂಧಿ ಮನವರಿಕೆ ಮಾಡಿದ್ದಕ್ಕೆ ನಾನು ನಾಮಪತ್ರ ಹಿಂಪಡೆದಿದ್ದೆ ಎಂದರು.

Key words: I did not -get -money-retrieve – nomination-Dharmasthala -muddahanumegowda