ನಾನು ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿ- ಈ.ಸಿ ನಿಂಗರಾಜು ಗೌಡ.

 

ಚಾಮರಾಜನಗರ,25,2021(www.justkannada.in): ನಾನು ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಈ.ಸಿ ನಿಂಗರಾಜು ಗೌಡ ತಿಳಿಸಿದ್ದಾರೆ.

ಚಾಮರಾಜನಗರದ ನಿಜಗುಣ ರೆಸಿಡೆನ್ಸಿಯಲ್ಲಿ ನಡೆದ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಈ.ಸಿ ನಿಂಗರಾಜು ಗೌಡ, ವ್ಯಕ್ತಿಗಿಂತ ದೇಶವೇ ಮುಖ್ಯ.  ಹಾಗೆಯೇ ದೇಶಕ್ಕಾಗಿ ದುಡಿಯುತ್ತಾ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪದವಿ ಪಡೆಯುತ್ತಾರೆ, ಆದರೆ ಅವರು ಉದ್ಯೋಗಕ್ಕಾಗಿ ಹಲವಾರು ಕಡೆ ಹುಡುಕಾಡುತ್ತಾರೆ..  ಒಂದು ವರ್ಷದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪದವಿ ಪಡೆಯುತ್ತಾರೆ. ಅದರಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ಕೊಡಬೇಕಾಗಿದೆ ಎಂದರು.

ನಮಗೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳಾದವು. ನಾವು ಬ್ರಿಟಿಷರ ಒಂದು ಕಪ್ಪು ಗೌನ್ ಮಾದರಿಯಲ್ಲೇ ಪದವಿಯನ್ನ ಸ್ವೀಕರಿಸಬೇಕಾಗಿತ್ತು. ಆದರೆ ಅದನ್ನ ಬದಲಿಸಿ ನಮ್ಮ ದೇಶ ಉಡುಗೆ ತೊಡುಗೆಗಳಿಗೆ ಸ್ಥಾನಮಾನ ನೀಡಲಾಗಿದೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ  ಪಿಎಚ್ ಡಿ ಮಾಡುವ ಸಂಶೋಧಕರಿಗೆ ಜೂನ್ ಮತ್ತು ಡಿಸೆಂಬರ್ ನಲ್ಲಿ ಎರಡು ಬಾರಿ ವರ್ಷಕ್ಕೆ ಪಿಎಚ್ಡಿ ಕೋರ್ಸುಗಳ ತರಗತಿಗಳನ್ನು ಸಹ ಕಡ್ಡಾಯಗೊಳಿಸಲಾಗಿದೆ ಎಂದು ಈಸಿ ನಿಂಗರಾಜುಗೌಡ ತಿಳಿಸಿದರು.

ತಂದೆ ತಾಯಿಗಳು ಮಕ್ಕಳ ವಿದ್ಯಾಭ್ಯಾಸದಲ್ಲಿ ಹೇರುತ್ತಿದ್ದ ಶಿಕ್ಷಣಕ್ಕೆ ಆದ್ಯತೆ ನೀಡದೆ ಮಕ್ಕಳು ತಮ್ಮ ಸ್ವ ಇಚ್ಛೆಯಿಂದ ಕಲಿಯುವ ವಿದ್ಯಾಭ್ಯಾಸಕ್ಕಾಗಿ ಅಥವಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅನಾವರಣಗೊಳಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಅನ್ನೂ ಸಹ ಅಧಿಕೃತವಾಗಿ ನಮ್ಮ ವಿಶ್ವವಿದ್ಯಾಲಯದಲ್ಲಿ ಅನಾವರಣ ಮಾಡಿದ್ದೇವೆ ಎಂದರು.

ಮಾಶಾಸನ ಸಮಿತಿಯಲ್ಲಿ ಸದಸ್ಯನಾಗಿ 5800 ಅರ್ಜಿಗಳಿಗೆ ಒಬ್ಬರಿಗೂ ತಪ್ಪದೆ 5800 ಗಳಿಗೂ ಸಹ ಕಲಾವಿದರಿಗೆ ಮಾಸಾಶನವನ್ನು ಸರ್ಕಾರದಿಂದ ಒದಗಿಸಿಕೊಟ್ಟಿದೆ. ಎಂಎಲ್ ಎ ಎಂಪಿ ಚುನಾವಣೆ ಹಾಗೆಯೇ ಎಂಎಲ್ಸಿ ಚುನಾವಣೆ ವಿಭಿನ್ನ.  ಏಕೆಂದರೆ ಒಬ್ಬ ಮತದಾರನಿಗೆ ಎಲ್ಲರಿಗೂ ಪ್ರಾಶಸ್ಯದ ಮತ ನೀಡುವ ಅವಕಾಶವಿದೆ. ತಮಗೆ ಬೇಕಾದ ಅಭ್ಯರ್ಥಿಗಳಿಗೆ ಮತವನ್ನು ನೀಡುವ ಅಧಿಕಾರವು ಇರುತ್ತದೆ. ಈ ನಡುವೆ ದಕ್ಷಿಣ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿಯಾಗಿದ್ದೇನೆ. ಈ ಚುನಾವಣೆಯಲ್ಲಿ ಜಯಶೀಲರನ್ನಾಗಿ ಮಾಡಿದರೇ ಪದವೀಧರ ಕ್ಷೇತ್ರದಲ್ಲಿ ಹಾಗೂ ಉಳಿದ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಇರುವ ಸಮಸ್ಯೆಗಳಿಗೆ ಪರಿಹಾರವನ್ನು ಸರ್ಕಾರದಿಂದ ಮಾಡಿಸಲು ಕೆಲಸ ಮಾಡುತ್ತೇನೆ  ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ರವೀಂದ್ರ ಮಾತನಾಡಿ, ಹಿಂದಿನವರು ಬಿಜೆಪಿಯಲ್ಲಿದ್ದಾಗ ಗೆಲ್ಲಿಸಿದ್ದು ಅಷ್ಟೇ.  ಆದರೆ ಅವರಿಗೆ ಅಧಿಕಾರ ಸಿಕ್ಕಾಗ ನಮಗೆ ಸ್ಪಂದಿಸದೆ ತಮ್ಮ ತಮ್ಮ ಕಾರ್ಯದಲ್ಲಿ ತೊಡಗಿಕೊಂಡರು. ಆದರೆ ಈಗ ನಮ್ಮನ್ನು ಜಯಶೀಲರನ್ನಾಗಿ ಮಾಡಿ ಸಾಕಷ್ಟು ಸಂಘಟನೆಗಳನ್ನು ಮಾಡಿಕೊಂಡು ಬಂದಂತಹ ಇವರು ರಾಜಕೀಯಕ್ಕೆ ಪ್ರವೇಶಿಸುತ್ತಿರುವುದು ಮತ್ತು ಪದವೀಧರ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಮತ್ತು ರಾಜ್ಯ ಸರ್ಕಾರಗಳಿಂದ ಮತ್ತಷ್ಟು ಬಲವನ್ನು ತುಂಬುತ್ತಾರೆ ಎಂದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಮಾತನಾಡಿ, ಇನ್ನು 10 ತಿಂಗಳು ಮಾಡಿರುವ ಯೋಜನೆಗಳು ಹಾಗೂ ಸಂಘಟನೆಯ ಕಾರ್ಯಗಳು ಹಾಗೂ ಸಿಂಡಿಕೇಟ್ ಸದಸ್ಯರು ಆದಂತಹ ನಮ್ಮ ಡಾ.ಈ.ಸಿ.ನಿಂಗರಾಜ ಗೌಡರು ಎಂಎಲ್ಸಿ ಮೂಲಕ ರಾಜಕೀಯ ಪ್ರವೇಶಿಸಿ ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಕ್ಷೇತ್ರದಲ್ಲಿರುವ ಸಾಕಷ್ಟು ಸಮಸ್ಯೆಗಳು ನಿರುದ್ಯೋಗ ಸಮಸ್ಯೆಗಳು ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.  ಪದವೀಧರರನ್ನು  ನೋಡಿದರೆ ಸಮಸ್ಯೆಗಳು ಸಮಸ್ಯೆಗಳಾಗಿ ಉಳಿದಿವೆ.  ನಮ್ಮ ಜಿಲ್ಲೆಯ ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುವುದರಲ್ಲಿ ಯಾವುದೇ ಸಂದೇಹವಿಲ್ಲ  ನಮ್ಮ ಜಿಲ್ಲೆಯ ಎಲ್ಲಾ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂದರು.

ಮಾಜಿ ಜಿಲ್ಲಾ BJP ಸಂಘಟನಾ ಕಾರ್ಯದರ್ಶಿ ಶೈಲೇಶ್ ಮಾತನಾಡಿ, ಈ.ಸಿ ನಿಂಗರಾಜು ಅವರಿಗೂ ನನಗೂ 30 ವರ್ಷಗಳ ಸ್ನೇಹವಿದೆ.  ವಿದ್ಯಾರ್ಥಿ ಜೀವನದಲ್ಲಿ ನಿಂಗೇಗೌಡರು ಎಬಿವಿಪಿ ಎಲ್ಲಿ ಸಂಘಟನೆ ಮಾಡಿಕೊಂಡು ಹಾಗೂ ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ..  ಬದುಕನ್ನು ಕಟ್ಟಿಕೊಂಡು ಕಟ್ಟುವಂತಹ ಹೊಂದಿದವರು ದಕ್ಷಿಣ ಪದವೀಧರ ಕ್ಷೇತ್ರ ಸ್ಪರ್ಧೆ ಮಾಡುತ್ತಿರುವುದು ಖುಷಿಯ ವಿಚಾರ ಹಾಗೂ ಮತದಾನದಲ್ಲಿ ಅಭ್ಯರ್ಥಿಯನ್ನು ಪಡೆಯಲೇಬೇಕು . ಇಲ್ಲಿಯವರೆಗೂ ಇಲ್ಲಿಯವರೆಗೂ ಡಾಕ್ಟರ್ ಹೆಸರು ಬಂದಿಲ್ಲ ಈಗ ಡಾಕ್ಟರ್ ಈಸಿ ನಿಂಗ ರಾಜೇಗೌಡರು ಹೆಸರನ್ನು ಕೇಳುತ್ತಿದ್ದೇವೆ ಶಿಕ್ಷಣ ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ನೀಡುತ್ತದೆ ಹಾಗೂ ಎಲ್ಲಾ ಉದ್ಯೋಗಗಳು ಉಪಯೋಗಕ್ಕೆ ಬರುತ್ತವೆ . ಅನ್ನ ಅಕ್ಷರ ಆರೋಗ್ಯ ಈ ಮೂರು ಮಾತ್ರ ನಿಲ್ಲಿಸುವುದಕ್ಕೆ ಆಗುವುದಿಲ್ಲ ಹಾಗೆಯೇ ಈ ಬಾರಿ ನಮ್ಮ ನಿಂಗರಾಜ ಗೌಡರನ್ನು ಗೆಲ್ಲಿಸುವುದರ ಮೂಲಕ ಪದವೀಧರ ಕ್ಷೇತ್ರಕ್ಕೆ ತರುಣರನ್ನು ಆಯ್ಕೆಮಾಡಿ ಕಳುಹಿಸಿ ಪದವೀಧರ ಕ್ಷೇತ್ರದಲ್ಲಿ ಇರುವ ಸಮಸ್ಯೆಗಳು ಹಾಗೂ ನಿರುದ್ಯೋಗ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ನಿಂಗರಾಜ್ ಅವರು ಪರಿಹರಿಸುತ್ತಾರೆ ಅಂದರು.

ಜ್ಯೋತ್ಸ ಸಂಸ್ಥೆ ಅಧ್ಯಕ್ಷರು ಮಂಜುನಾಥ ಎಸ್ ಗೌಡ ಇವರು ಮಾತನಾಡಿ, ಇಂದಿನ ಯುವಕರು ಯಾರು ಕೂಡ ಹೆಚ್ಚಾಗಿ ಭಾಷಣವನ್ನು ಕೇಳುವುದಿಲ್ಲ ಹಾಗೂ ಕೇಳಲು ಕುಳಿತುಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಇಲ್ಲಿ ನೀವೆಲ್ಲಾ ಕುಳಿತಿರುವುದು ಉತ್ತಮವಾಗಿದೆ.  ನಾವು ನಮ್ಮ ಸ್ನೇಹಿತರಾದ ಡಾಕ್ಟರ್ ಈಸಿ ನಿಂಗರಾಜ ಗೌಡರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಹಲವಾರು ಸಾಮಾಜಿಕ ಕಾರ್ಯ ಮಾಡುವುದು ಹಾಗೂ ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಅವರು ಮಾಡುವ ಕಾರ್ಯವು ಮೈಸೂರು ಜಿಲ್ಲೆಗೆ ಸೀಮಿತವಾಗದೆ ಎಂಎಲ್ಸಿ ಮೇಲ್ಮನೆಗೆ ಹೋಗುವಂತೆ ಒತ್ತಾಯ ಮಾಡಿದ ಸ್ನೇಹಿತರೆಲ್ಲರೂ ನಮ್ಮ ಸ್ನೇಹಿತರ ಒತ್ತಾಯಕ್ಕೆ ಅವರು ಇಂದು ಸ್ಪರ್ಧೆಗೆ ಭಾಗವಹಿಸುತ್ತಿದ್ದಾರೆ.  ಸಾಕಷ್ಟು ಕೆಲಸವನ್ನು ಸಾಮಾಜಿಕವಾಗಿ ಪದವೀಧರ ಕ್ಷೇತ್ರದಲ್ಲಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸವನ್ನು ಮಾಡಲಿ ಎಂದು ಹಾಗೂ ನಿರುದ್ಯೋಗಕ್ಕಾಗಿ  ಒಟ್ಟಾಗಿ ಹೋರಾಟ ಮಾಡಿ ಎಂದು ಕೇಳಿಕೊಳ್ಳುತ್ತೇವೆ.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚಾಮರಾಜನಗರದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಕಳೆದ ಚುನಾವಣೆಯಲ್ಲಿ 8000 ನೋಂದಣಿಯಾಗಿದ್ದು ಈ ಬಾರಿ 10000 ಮಾಡಿಸಬೇಕು ಹಾಗೂ ಸರ್ಕಾರ ಕೊಡುತ್ತಿರುವ ಹುದ್ದೆಗಳಲ್ಲಿ ಸಾಕಷ್ಟು ಹುದ್ದೆಗಳು ನೂರಕ್ಕೆ ತೊಂಬತ್ತು ಭಾಗ ಹುದ್ದೆಗಳು ಭರ್ತಿಯಾಗಿಲ್ಲ.  ಹುದ್ದೆಗಳು ಖಾಲಿ ಇವೆ . ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಘಟನೆಗಳ ಮೂಲಕ ಹಾಗೂ ಹಲವರು  ಬದುಕನ್ನು ಹಾಗೂ ಸಹಾಯಹಸ್ತ ಚಾಚಿದ ಅವರಿಗೆ ಇಲ್ಲ ಎಂಬ ಮಾತನ್ನು ಹೇಳಿದೆ ಎಲ್ಲ ಕೆಲಸಗಳನ್ನು ಮಾಡುವಂತಹ ನಮ್ಮ ಈ.ಸಿ ನಿಂಗರಾಜ ಗೌಡರು ಈ ಬಾರಿ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಗೆದ್ದು ಪದವೀಧರ ಕ್ಷೇತ್ರದಲ್ಲಿ ಇರುವ ಸಾಕಷ್ಟು ಸವಾಲುಗಳು ಹಾಗೂ ಸಮಸ್ಯೆಗಳಿಗೆ ಸರ್ಕಾರದ ಮೂಲಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತಾರೆ ಎಂದರು.

Key words: I am – BJP party -ticket -aspirant – Southern Graduate constituency-. E. C. Ningaraju Gowda.