ಸಾಧಕರನ್ನು ಗೌರವಿಸುವ ಕಾರ್ಯ ಕಿರಿಯರಿಗೆ ಸ್ಪೂರ್ತಿದಾಯಕ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

kannada t-shirts

ಮೈಸೂರು,ನವೆಂಬರ್,18,2020(www.justkannada.in) : ಹಿರಿಯರು, ಸಾಧಕರನ್ನು ಗೌರವಿಸುವ ಕಾರ್ಯವು ಕಿರಿಯರಿಗೆ ಸ್ಪೂರ್ತಿದಾಯಕವಾಗುವುದು. ಪ್ರೊ.ಕೆ.ಎಸ್.ರಂಗಪ್ಪ, ಪ್ರೊ.ಕೆ.ಬಸವಯ್ಯ ಅವರನ್ನು ಸನ್ಮಾನಿಸಿರುವುದು ನಮ್ಮನ್ನು ನಾವು ಅಭಿನಂದಿಸಿಕೊಂಡಂತೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

honoring-achievers-Inspiring-Minors-Chancellor- Prof.G.Hemant Kumar
ವಿಜ್ಞಾನ ಭವನದಲ್ಲಿ ಮೈಸೂರು ವಿವಿ ರಸಾಯನಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ‘’ವಿಶ್ವದ ಅಗ್ರ 2% ವಿಜ್ಞಾನಿಗಳಾಗಿ ಗುರುತಿಸಲಾದ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಹಾಗೂ ರಸಾಯನಶಾಸ್ತ್ರ ಅಧ್ಯಯನ ವಿಭಾಗ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಬಸವಯ್ಯ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿವಿಯಿಂದ ಇಬ್ಬರು ಮಹಾನೀಯರನ್ನು ವಿಶ್ವದ ಅಗ್ರ 2% ವಿಜ್ಞಾನಿಗಳಾಗಿ ಗುರುತಿಸಿರುವುದು ಹೆಮ್ಮೆ ಪಡುವಂತಹ ವಿಷಯವಾಗಿದೆ. ಪ್ರೊ.ಕೆ.ಎಸ್.ರಂಗಪ್ಪ ಅವರು ಅಪಾರ ಸಾಧನೆ ಮಾಡಿದ್ದು, ಮೈಸೂರು ವಿವಿಗೆ ಉತ್ತಮ ಆಡಳಿತ ನಡೆಸುವ ಮೂಲಕ ಮಾದರಿ ಮಾರ್ಗವನ್ನು ಹಾಕಿಕೊಟ್ಟಿದ್ದಾರೆ ಎಂದರು.

ಶೈಕ್ಷಣಿಕ ಅಭಿವೃದ್ಧಿಯ ಜೊತೆಗೆ ದೊಡ್ಡ ಗಡಿಯಾರ, ಕುವೆಂಪು ಪ್ರತಿಮೆ ಸ್ಥಾಪನೆ ಹೀಗೆ ವಿವಿಯ ಸೌಂದರ್ಯವನ್ನು ಹೆಚ್ಚಿಸುವ ಕಾರ್ಯವನ್ನು ಮಾಡಿದ್ದಾರೆ. ತಮ್ಮ ಆಡಳಿತ ಅವಧಿಯಲ್ಲಿ ವಿವಿಯನ್ನು ಉನ್ನತ ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು.

honoring-achievers-Inspiring-Minors-Chancellor- Prof.G.Hemant Kumar
ವಿವಿಯಲ್ಲಿ ಯಾವುದೇ ಗೊಂದಲವಿಲ್ಲ. ಹೃದಯವಂತಿಕೆ ಹೆಚ್ಚಿಸಿಕೊಳ್ಳುವುದರ ಜೊತೆಗೆ ಸಂಕುಚಿತ ಮನೋಭಾವ ಬಿಡಬೇಕಿದೆ. ಆ ಮೂಲಕ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಅಭಿವೃದ್ಧಿಯ ಕಡೆಗೆ ಹೆಚ್ಚು ಗಮನಹರಿಸುವ ಎಂದು ಹೇಳಿದರು.

ವಿವಿಯಲ್ಲಿ ಸಂಶೋಧನೆ, ಬೋಧನೆ ಎರಡು ಬಹಳ ಮುಖ್ಯವಾಗಿದೆ. 13 ವರ್ಷದಿಂದ ಯಾವುದೇ ನೇಮಕ ವಾಗಿಲ್ಲ. ಸರಕಾರವು ಶೀಘ್ರವೇ ಒಪ್ಪಿಗೆ ನೀಡಿದರೆ ಪ್ರತಿಭಾವಂತರನ್ನು ಆಯ್ಕೆಮಾಡಲಾಗುವುದು. ಈ ಕುರಿತು ಸರ್ಕಾರ ಗಮನಹರಿಸಬೇಕಿದೆ ಎಂದು ತಿಳಿಸಿದರು.

ಈ ದಿನವು ಇತಿಹಾಸದಲ್ಲಿ ದಾಖಲಿಸುವಂತಹ ದಿನವಾಗಿದೆ. ವಿವಿಯು ಹಂತ,ಹಂತವಾಗಿ ಗುರುತಿಸಿಕೊಳ್ಳುತ್ತಿದ್ದು, ಫೆಬ್ರವರಿ, ಮಾರ್ಚ್ ಗೆ ನ್ಯಾಕ್ ನಿಂದ ಉತ್ತಮ ಫಲಿತಾಂಶ ಪಡೆದುಕೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಪ್ರೊ.ಕೆ.ಬಸವಯ್ಯ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಯಾವುದೇ ವಿಭಾಗವನ್ನು ಮುಚ್ಚಬಾರದು. ವಿಭಾಗಗಳಲ್ಲಿ ಬದಲಾವಣೆಯನ್ನು ತರುವ ಮೂಲಕ ಹೇಗೆ ಅದನ್ನು ಉಳಿಸಿಕೊಳ್ಳಬಹುದು ಎಂಬುದರ ಬಗ್ಗೆ ಯೋಚಿಸಬೇಕು ಎಂದು ಸಲಹೆ ನಿಡಿದರು.

honoring-achievers-Inspiring-Minors-Chancellor- Prof.G.Hemant Kumar
ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ.ಮಹದೇವನ್, ರಸಾಯನಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ನಾಗರಾಜನಾಯ್ಕ ಇತರರು ಉಪಸ್ಥಿತರಿದ್ದರು.

English summary….

Felicitating achievers is an inspiration for juniors: VC Prof. G.Hemanth Kumar
Mysuru, Nov. 18, 2020 (www.justkannada.in): Prof. G. Hemanth Kumar, Vice Chancellor, Mysore University expressed his view that felicitating achievers will indeed become an inspiration to the youngsters.
Presiding over the felicitation programme to former Mysore University VC Prof. K.S. Rangappa and Department of Research in Chemistry Retd. Professor Prof. K. Basavaiah today, he said that it was in fact a matter of pride that two persons from the university were recognised as the world’s top 2% scientists.honoring-achievers-Inspiring-Minors-Chancellor- Prof.G.Hemant Kumar
“There are no confusions in administration of the university. It is just that we have to develop more concern and stop being narrow-minded. Everything will fall in place. Let us all focus on development of the university,” he said.
Prof. R. Shivappa, Registrar, MU, Prof. K.M. Mahadevan, Registrar-Examinations, Prof.Nagarajanayaka, HOD, Department of Research in Chemistry and others were present.
Keywords: felicitation-Mysore University-Prof. G. Hemanth Kumar

key words : honoring-achievers-Inspiring-Minors-Chancellor- Prof.G.Hemant Kumar

website developers in mysore