ಐಪಿಎಲ್ ನಿರೀಕ್ಷೆಯಲ್ಲಿರುವ ಅಭಿಮಾನಿಗಳಿಗೆ ಗುಡ್ ನ್ಯೂಸ್ !

ನವದೆಹಲಿ, ಜೂನ್ 01, 2020 (www.justkannada.in):ಜಿಮ್, ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳ ಆರಂಭಕ್ಕೆ ಹಸಿರು ನಿಶಾನೆ ಸಿಕ್ಕಿದೆ. ಇದು ಐಪಿಎಲ್ ಆಯೋಜಿಸಲು ಮತ್ತಷ್ಟು ಬಲ ನೀಡಿದೆ.

ಕೇಂದ್ರ ಸರ್ಕಾರ ಲಾಕ್ ಡೌನ್ 5 ರಲ್ಲಿ ಸಾಕಷ್ಟು ಸಡಿಲಿಕೆ ಮಾಡಿದ್ದು, ಜಿಮ್, ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳ ಆರಂಭಕ್ಕೆ ಹಸಿರು ನಿಶಾನೆ ತೋರಿದೆ.

ಈಗ ಅಕ್ಟೋಬರ್ ನಲ್ಲಿ ಐಪಿಎಲ್ ನಡೆಸುವುದಾದರೂ ಪೂರ್ವ ತಯಾರಿಗೆ ಇದ್ದಿದ್ದ ಅಡ್ಡಿಗಳೆಲ್ಲಾ ನಿವಾರಣೆಯಾಗಿದೆ. ಹೀಗಾಗಿ ಬಿಸಿಸಿಐ ಈ ವರ್ಷದ ಐಪಿಎಲ್ ಆಯೋಜಿಸುವ ಭರವಸೆಯಲ್ಲಿದೆ. ಟಿ20 ವಿಶ್ವಕಪ್ ಕ್ರಿಕೆಟ್ ಮುಂದೂಡಿಕೆಯಾದರೆ ಅಕ್ಟೋಬರ್ ನಲ್ಲಾದರೂ ಐಪಿಎಲ್ ಆಯೋಜಿಸಲು ಸಿದ್ಧತೆ ನಡೆಸಿದೆ.