ಜು.27ರಂದು ಮೈಸೂರು ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ.

Promotion

ಮೈಸೂರು,ಜುಲೈ,25,2022(www.justkannada.in): ಶತಮಾನಗಳ ಇತಿಹಾಸ ಹೊಂದಿರುವ, ಕರ್ನಾಟಕದ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆಯನ್ನು ಜುಲೈ 27ರಂದು ಆಯೋಜಿಸಲಾಗಿದೆ.

ಮೈಸೂರು ವಿವಿಯ ಕ್ರಾರ್ಡ್ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ರಾಜ್ಯಪಾಲರದ ಆರ್.ಎನ್.ರವಿ ಕಾರ್ಯಕ್ರಮವನ್ನು ಉದ್ಘಾಟಿಸುವ ಜೊತೆಗೆ ಸಂಸ್ಥಾಪನಾ ದಿನಾಚರಣೆ ಭಾಷಣವನ್ನು ನೀಡಲಿದ್ದಾರೆ.

ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಕುಲಸಚಿವ ಪ್ರೊ.ಆರ್.ಶಿವಪ್ಪ, ಸಿಂಡಿಕೇಟ್ ಹಾಗೂ ಶಿಕ್ಷಣ ಮಂಡಳಿಯ ಸದಸ್ಯರು ಮತ್ತು ಬೋಧಕ-ಬೋಧಕೇತರ ವರ್ಗದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Key words: Foundation Day – Mysore University – June 27.