ಎಸ್ ಐಟಿ ವಶಕ್ಕೆ ಪಡೆದ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ಮಾಜಿ ಸಚಿವ ರೋಷನ್ ಬೇಗ್…

ಬೆಂಗಳೂರು,ಜು,16,2019(www.justkannada.in):  ಐಎಂಎ ಕಂಪನಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನ ಬಂಧಿಸಿರುವ ಎಸ್ ಐಟಿ ಕ್ರಮವನ್ನ ಪ್ರಶ್ನಿಸಿ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಹೂಡಿಕೆದಾರರಿಗೆ ಐಎಂಎ ಕಂಪನಿ ವಂಚನೆ ಪ್ರಕರನಕ್ಕೆ ಸಂಬಂಧಿಸಿದಂತೆ  ರೋಷನ್ ಬೇಗ್ ಅವರನ್ನ ಎಸ್ ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಇನ್ನು ಎಸ್ ಐಟಿ ವಿಚಾರಣೆಗೆ ಹಾಜರಾಗಲು ರೋಷನ್ ಬೇಗ್ ಕಾಲಾವಕಾಶ ಕೇಳಿದ್ದರು. ಆದರೂ ಎಸ್ ಐಟಿ ನಿನ್ನೆ  ರೋಷನ್ ಬೇಗ್ ಅವರನ್ನ ವಶಕ್ಕೆ ಪಡೆದಿದೆ.

ಈ ಹಿನ್ನೆಲೆ ರೋಷನ್ ಬೇಗ್ ಅವರ ಪರ ವಕೀಲರು ಎಸ್ ಐಟಿ ನಡೆ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿಸಲ್ಲಿಸಿದ್ದಾರೆ ಎನ್ನಲಾಗಿದೆ. ರಾಜೀನಾಮೆ ಹಿಂಪಡೆಯಲು ಒತ್ತಡ ಹೇರುವ ಉದ್ದೇಶದಿಂದ ರಾಜ್ಯ ಸರ್ಕಾರದಿಂದ ಎಸ್ ಐಟಿ ದುರ್ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಮಾಡಿದ್ದಾರೆ.

Key words: Former minister -Roshan Beg– High Court -SIT.