ಮಹಾರಾಷ್ಟ್ರದ ನೂತನ ಸಿಎಂ ಆಗಿ ಏಕನಾಥ್ ಶಿಂಧೆ ಆಯ್ಕೆ.

ಮುಂಬೈ,ಜೂನ್,30,2022(www.justkannada.in):  ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆಯಿಂದಾಗಿ ಮಹಾವಿಕಾಸ್ ಅಘಾಡಿ ಸರ್ಕಾರ ಪತನಗೊಂಡಿದ್ದು. ನೂತನ ಸಿಎಂ ಆಗಿ ದೇವೆಂದ್ರ ಫಡ್ನವೀಸ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿತ್ತು. ಆದರೆ ರಾಜಕೀಯ ಬೆಳವಣಿಗೆಯಲ್ಲಿ ನಾಟಕೀಯ ತಿರುವು ಕಂಡಿದ್ದು, ಮಹಾರಾಷ್ಟ್ರದ ನೂತನ ಸಿಎಂ ಆಗಿ ಏಕನಾಥ ಸಿಂಧೆ ಆಯ್ಕೆಯಾಗಿದ್ದಾರೆ. ಇಂದು ಸಂಜೆ 7.30ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಉದ್ಧವ್ ಠಾಕ್ರೆ ಸರ್ಕಾರ ಪತನಗೊಂಡ ಬೆನ್ನಲ್ಲೆ ಗೋವಾದಿಂದ ಮುಂಬೈಗೆ ಆಗಮಿಸಿದ ಏಕನಾಥ್ ಶಿಂಧೆ ಅವರು ದೇವೆಂದ್ರ ಫಡ್ನಾವಿಸ್ ಜೊತೆ ರಾಜಭವನಕ್ಕೆ ತೆರಳಿ ನೂತನ ಸರ್ಕಾರ ರಚನೆಗೆ ರಾಜ್ಯಪಾಲರ ಬಳಿ ಹಕ್ಕು ಮಂಡಿಸಿದರು.  ಬಳಿಕ ಏಕನಾಥ್ ಸಿಂಧೆ ಮಹಾರಾಷ್ಟ್ರ ನೂತನ ಸಿಎಂ ಎಂದು ದೇವೇಂದ್ರ ಫಡ್ನಾವೀಸ್ ಘೋಷಣೆ ಮಾಡಿದ್ದಾರೆ.  

ಈ ಹಿನ್ನೆಲೆಯಲ್ಲಿ ಮುಂಬೈನ ರಾಜಭವನದಲ್ಲಿ ಮಹಾರಾಷ್ಟ್ರ ಸಿಎಂ ಆಗಿ ಏಕನಾಥ್ ಸಿಂಧೆ ಅಧಿಕಾರ ಸ್ವೀಕರಿಸಲಿದ್ದಾರೆ.  ನೂತನ ಮೈತ್ರಿ ಸರ್ಕಾರಕ್ಕೆ ಏನನಾಥ್ ಸಿಂಧೆ ಬಣದ 49 ಶಾಸಕರು ಬೆಂಬಲ ನೀಡಿದ್ದಾರೆ. ಸಿಂಧೆಗೆ ಬಿಜೆಪಿ ಬೆಂಬಲ ನೀಡಿದೆ. ಬಂಡಾಯ ಶಾಸಕರ ನೇತೃತ್ವ ವಹಿಸಿದ್ಧ ಏಕನಾಥ್ ಸಿಂಧೆಗೆ ಸಿಎಂ ಪಟ್ಟ ಒಲಿದು ಬಂದಿದೆ.

Key words: Eknath Shinde- elected – new CM – Maharashtra.