ವಿಶ್ವಕಪ್ ಕ್ರಿಕೆಟ್: ಹೈದರಾಬಾದ್’ಗೆ ಬಂದಿಳಿದ ಪಾಕ್ ಕ್ರಿಕೆಟಿಗರಿಗೆ ಕೇಸರಿ ಶಾಲು ಹೊದಿಸಿ ಸ್ವಾಗತ

Promotion

ಬೆಂಗಳೂರು, ಸೆಪ್ಟೆಂಬರ್ 28, 2023 (www.justkannada.in): ವಿಶ್ವಕಪ್ ಕ್ರಿಕೆಟ್ ಗಾಗಿ ಪಾಕಿಸ್ತಾನ ತಂಡ ಬುಧವಾರ ತಡರಾತ್ರಿ ಭಾರತಕ್ಕೆ ಆಗಮಿಸಿದ್ದು, ಹೈದರಾಬಾದ್‌ ನಲ್ಲಿ ಕೇಸರಿ ಶಾಲು ಹೊದಿಸಿ ಆಟಗಾರರನ್ನು ಸ್ವಾಗತಿಸಲಾಗಿದೆ.

ಬಾಬರ್‌ ಅಜಂ ನೇತೃತ್ವದ ಪಾಕಿಸ್ತಾನ ತಂಡ ದುಬೈ ಮೂಲಕ ಹೈದರಬಾದಾದ್‌ ಗೆ ಬಂದಿಳಿಯಿತು.

ಅಂದಹಾಗೆ ಅಕ್ಟೋಬರ್‌ 5ರಿಂದ ವಿಶ್ವಕಪ್‌ ಟೂರ್ನಿ ಅಧಿಕೃತವಾಗಿ ಆರಂಭಗೊಳ್ಳಲಿದ್ದು, ಸೆಪ್ಟೆಂಬರ್‌ 29ರಂದು ನ್ಯೂಜಿಲೆಂಡ್‌ ವಿರುದ್ಧ ಮೊದಲ ಅಭ್ಯಾಸ ಪಂದ್ಯದಲ್ಲಿ ಪಾಕ್ ತಂಡ ಪಾಲ್ಗೊಳ್ಳಲಿದೆ.

ಸುದೀರ್ಘ ಪ್ರಯಾಣದ ಹಿನ್ನೆಲೆಯಲ್ಲಿ ಪಾಕ್ ಆಟಗಾರರು ಗುರುವಾರ ವಿಶ್ರಾಂತಿಗೆ ಮೊರೆ ಹೋಗಿದ್ದಾರೆ. ಅಕ್ಟೋಬರ್‌ 3ರಂದು ಆಸ್ಟ್ರೇಲಿಯಾ ವಿರುದ್ಧ ಎರಡನೇ ಅಭ್ಯಾಸ ಪಂದ್ಯ ಆಡಲಿದೆ.

ನೆದರ್ಲೆಂಡ್‌ ವಿರುದ್ಧದ ಪಂದ್ಯದ ಮೂಲಕ ಪಾಕ್ ವಿಶ್ವಕಪ್‌ ಅಭಿಯಾನ ಆರಂಭಿಸಲಿದ್ದು, ಅಕ್ಟೋಬರ್‌ 10ರಂದು ಶ್ರೀಲಂಕಾ ತಂಡವನ್ನು ಪಾಕಿಸ್ತಾನ ಎದುರಿಸಲಿದೆ.