ಜಪಾನ್’ನಲ್ಲೂ ಮಿತಿ ಮೀರಿದ ಕೋವಿಡ್: ಮೇ 11ರವರೆಗೆ ತುರ್ತು ಪರಿಸ್ಥಿತಿ ಘೋಷಣೆ

ಬೆಂಗಳೂರು, ಏಪ್ರಿಲ್ 25, 2021 (www.justkannada.in): 

ಕೊರೊನಾ ಸೋಂಕು ಮಿತಿ ಮೀರಿದ ಹಿನ್ನೆಲೆಯಲ್ಲಿ ಜಪಾನ್ ಸರ್ಕಾರ ಮೂರನೇ ಬಾರಿಗೆ ತುರ್ತು ಪರಿಸ್ಥಿತಿ ಜಾರಿ ಮಾಡಿದೆ.

ಜಪಾನಿನ ಟೋಕಿಯೊ, ಒಸಾಕಾ, ಕ್ಯೋಟೋ ಮತ್ತು ಹ್ಯೋಗೊ ಪ್ರಾಂತ್ಯಗಳಲ್ಲಿ ಮೂರು ವಾರಗಳ ತುರ್ತು ಪರಿಸ್ಥಿತಿ ಜಾರಿ ಮಾಡಿ ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ ಆದೇಶ ಹೊರಡಿಸಿದ್ದಾರೆ.

25 ರಿಂದ ಮೇ 11ರವರೆಗೂ ತುರ್ತು ಪರಿಸ್ಥಿತಿ ಜಾರಿಯಲ್ಲಿರುತ್ತದೆ. ಏಪ್ರಿಲ್ ಅಂತ್ಯದಿಂದ ಮೇ ಮೊದಲ ವಾರದವರೆಗೆ ಜಪಾನ್‌ನ ಗೋಲ್ಡನ್ ವೀಕ್ ರಜಾದಿನ. ಈ ಸಂದರ್ಭದಲ್ಲಿ ಜನರು ವೈರಸ್ ಪ್ರಸರಣವನ್ನು ತಡೆಯಲು ಈ ಕ್ರಮ ಅನಿವಾರ್ಯವಾಗಿದೆ ಎಂದು ಜಪಾನ್ ಪ್ರಧಾನಿ ಹೇಳಿದ್ದಾರೆ.