ಇಂದು ರಾತ್ರಿ ಮುಂಬೈ ಮೂಲಕ ಅಮೇರಿಕಾಗೆ ತೆರಳಲಿರುವ ಸಿಎಂ ಕುಮಾರಸ್ವಾಮಿ

 

ಬೆಂಗಳೂರು, ಜೂ.28, 2019 : (www.justkannada.in news ) ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ರಾತ್ರಿ ಅಮೇರಿಕಾಗೆ ಪ್ರಯಾಣಿಸಲಿದ್ದಾರೆ.

ರಾತ್ರಿ 7 ಗಂಟೆಗೆ ಮುಂಬೈ ಮೂಲಕ ಸಿಎಂ ಕುಮಾರಸ್ವಾಮಿ ಅವರು ಅಮೇರಿಕಾಗೆ ತೆರಳುತ್ತಿದ್ದಾರೆ. ನ್ಯೂಜೆರ್ಸಿಯಲ್ಲಿ ಆಯೋಜಿಸಿರುವ ಆದಿಚುಂಚನಗಿರಿ ಮಠದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಸಿಎಂ ಎಚ್ಡಿಕೆ ಅಲ್ಲಿಗೆ ತೆರಳುತ್ತಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿ, ಅಮೆರಿಕಕ್ಕೆ ತೆರಳುತ್ತಿರುವುದು ಅಧಿಕೃತ ಕೆಲಸದ ಮೇಲಲ್ಲ. ಪ್ರಯಾಣವನ್ನು ವೈಯಕ್ತಿಕ ಖರ್ಚಿನಲ್ಲಿ ಮಾಡುತ್ತಿದ್ದೇನೆ. ಅಧಿಕೃತವಲ್ಲದ ಕೆಲಸಗಳಿಗೆ ಕುಮಾರಸ್ವಾಮಿ ಅವರು ತೆರಿಗೆದಾರರ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.

ಮೈತ್ರಿಗೆ ಶ್ರೇಯ :
ಕಾಂಗ್ರೆಸ್- ಜೆಡಿಎಸ್ ಮೈತ್ರಿಗೆ ಗ್ರಾಮ ವಾಸ್ತವ್ಯದ ಶ್ರೇಯ ಸಲ್ಲುತ್ತದೆ. ಸಂಪುಟದಲ್ಲಿ ಸಚಿವರಾಗಿರುವ ಕಾಂಗ್ರೆಸ್ ನವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಆದ್ದರಿಂದ ಶ್ರೇಯವು ಸರಕಾರಕ್ಕೆ ಹಾಗೂ ಎಲ್ಲ ಇಲಾಖೆ ಅಧಿಕಾರಿಗಳಿಗೆ ಸಲ್ಲುತ್ತದೆ ಎಂದು ಪ್ರಶ್ನೆಯೊಂದಕ್ಕೆ ಸಿಎಂ ಕುಮಾರಸ್ವಾಮಿ ಉತ್ತರಿಸಿದರು.

key words : chief.minister-h.d.kumaraswamy-travel-to-america-today-night-from-bombay-airport