ಲಸಿಕೆ ಕೊರತೆ:  ಮೇ ತಿಂಗಳಲ್ಲಿ ಕೋವಿಡ್ ಸೋಂಕಿನಿಂದ ಏರ್ ಇಂಡಿಯಾದ ಐವರು ಹಿರಿಯ ಪೈಲಟ್‌ ಗಳು ಬಲಿ.

ನವದೆಹಲಿ, ಜೂನ್ 3, 2021(www.justkannada.in): ಕೋವಿಡ್ ವಾರಿಯರ್ಸ್ ಸಾಲಿನಲ್ಲಿ ವಿಮಾನಗಳನ್ನು ನಡೆಸುವ ಪೈಲಟ್‌ ಗಳೂ ಸೇರಿದ್ದಾರೆ. ಏರ್ ಇಂಡಿಯಾದ ಪೈಲಟ್‌ಗಳು ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ಜನರ ಹಾಗೂ ದೇಶದ ಸೇವೆ ಮಾಡುತ್ತಿದ್ದಾರೆ. ಏರ್ ಇಂಡಿಯಾ ಪೈಲಟ್‌ ಗಳು ತಮಗೆ ಹಾಗೂ ತಮ್ಮ ಕುಟುಂಬಸ್ಥರಿಗೆ ಕೋವಿಡ್ ಲಸಿಕೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಆದರೆ ಲಸಿಕೆ ನೀಡುವಲ್ಲಿ ಆಗಿರುವ ವಿಳಂಬದ ಕಾರಣದಿಂದಾಗಿ ಮೇ ತಿಂಗಳೊಂದರಲ್ಲೇ ಐದು ಜನ ಹಿರಿಯ ಪೈಲಟ್‌ ಗಳು ಸೋಂಕಿಗೆ ಬಲಿಯಾಗಿರುವುದ ತಿಳಿದು ಬಂದಿದೆ.jk

ಏರ್ ಇಂಡಿಯಾ ಹಾಗೂ ಪೈಲಟ್ಸ್ ಯೂನಿಯನ್ನ ಅಧಿಕೃತ ಮೂಲಗಳ ಪ್ರಕಾರ ಕೋವಿಡ್ ಸೋಂಕಿನಿಂದಾಗಿ ತಮ್ಮ ಪ್ರಾಣ ಕಳೆದುಕೊಂಡಿರುವ ಐವರು ಪೈಲಟ್‌ಗಳು ಕ್ಯಾಪ್ಟನ್ ಪ್ರಸಾದ್ ಕರ್ಮಾಕರ್, ಕ್ಯಾಪ್ಟನ್ ಸಂದೀಪ್ ರಾಣ, ಕ್ಯಾಪ್ಟನ್ ಅಮಿತೇಶ್ ಪ್ರಸಾದ್, ಕ್ಯಾಪ್ಟನ್ ಜಿ.ಪಿ.ಎಸ್. ಗಿಲ್ ಹಾಗೂ ಕ್ಯಾಪ್ಟನ್ ಹರ್ಷ್ ತಿವಾರಿ.

ಈ ಪೈಕಿ ಹರ್ಷ್ ತಿವಾರಿ ಮೇ ೩೦ರಂದು ಬಲಿಯಾದರು. ಅವರು ಬೋಯಿಮ್ 777 ವಿಮಾನದ ಪ್ರಥಮ ಅಧಿಕಾರಿಯಾಗಿದ್ದರು. ಈ ಎಲ್ಲಾ ಪೈಲಟ್‌ ಗಳು ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಕೆಲಸದಲ್ಲಿದ್ದು, ವಂದೇ ಮಾತರಂ ಮಿಷನ್‌ ನ ಭಾಗವಾಗಿದ್ದರು ಎನ್ನಲಾಗಿದೆ.

ಮೇ 4ರಂದು, ಏರ್ ಇಂಡಿಯಾದ ವಿಮಾನಚಾಲಕರು ಲಸಿಕೆ ನೀಡದಿದ್ದರೆ ವಿಮಾನಗಳ ಹಾರಾಟವನ್ನು ನಿಲ್ಲಿಸುವುದಾಗಿ ತಿಳಿಸಿದ್ದರು. ಆಗ ಏರ್ ಇಂಡಿಯಾ ಈ ತಿಂಗಳ ಅಂತ್ಯದೊಳಗೆ ತನ್ನ ಎಲ್ಲಾ ಉದ್ಯೋಗಿಗಳಿಗೂ ಲಸಿಕೆ ನೀಡಲು ಶಿಬಿರವನ್ನು ಏರ್ಪಡಿಸುವುದಗಿ ತಿಳಿಸಿತು. ಆದರೆ, ಲಸಿಕೆಗಳ ಕೊರತೆಯಿಂದಾಗಿ ಮೂರು ಶಿಬಿರಗಳನ್ನು ರದ್ದುಪಡಿಸಲಾಯಿತು. ಹಾಗೂ ಈ ಲಸಿಕಾ ಅಭಿಯಾನ ಮೇ 15ರಂದು ವಿಳಂಬವಾಗಿ ಆರಂಭವಾಯಿತು. ಏರ್ ಇಂಡಿಯಾ ಈ ಹಿಂದೆ 45 ವರ್ಷಗಳಿಗೆ ಮೇಲ್ಪಟ್ಟ ಉದ್ಯೋಗಿಗಳಿಗಾಗಿ ಲಸಿಕಾ ಶಿಬಿರಗಳನ್ನು ನಡೆಸಿತ್ತು.

ಏರ್ ಇಂಡಿಯಾದ ನಿರ್ದೇಶಕರಾದ (ಕಾರ್ಯಾಚರಣೆಗಳು) ಕ್ಯಾಪ್ಟನ್ ಆರ್.ಎಸ್. ಸಂಧು ಅವರಿಗೆ ಇಂಡಿಯನ್ ಕಮರ್ಷಿಯಲ್ ಪೈಲಟ್ಸ್ ಅಸೋಸಿಯೇಷನ್ (ಐಸಿಪಿಎ) ಮಂಗಳವಾರ ಈ ಕುರಿತು ಒಂದು ಪತ್ರವನ್ನು ಬರೆದಿದ್ದು ಅದರ ಸಾರಾಂಶ ಈ ರೀತಿಯಿದೆ:

“ಪೈಲಟ್‌ ಗಳು ಸೋಂಕಿನ ಸೂಚನೆಗಳಿಂದಾಗಿ ಕ್ವಾರಂಟೈನ್ ಆಗುತ್ತಿದ್ದಾರೆ, ಹಲವರಿಗೆ ಕೊರೊನಾ ಪಾಸಿಟಿವ್ ಬಂದಿದೆ ಹಾಗೂ ಬಹಳ ವೇಗವಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಪೈಲಟ್‌ ಗಳಷ್ಟೇ ಅಲ್ಲದೆ ಅವರ ಕುಟುಂಬಗಳ ಸದಸ್ಯರೂ ಸಹ ಈ ಸೋಂಕಿಗೆ ತುತ್ತಾಗುತ್ತಿದ್ದು, ಬಲಿಯಾಗುತ್ತಿದ್ದಾರೆ. ವಿಬಿಎಂ (ವಂದೇ ಭಾರತ್ ಮಿಷನ್) ನಡಿ ಕೆಲಸ ನಿರ್ವಹಿಸಿದ ನಂತರ ಮನೆಗೆ ಹಿಂದಿರುಗುವ ಮೂಲಕ ನಮ್ಮ ಕುಟುಂಬಸ್ಥರೂ ಸಹ ಸೋಂಕಿಗೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ನಮ್ಮ ಕೆಲಸವನ್ನು ಮುಂದುವರೆಸಲು ಹಾಗೂ ನಮ್ಮ ಕುಟುಂಬಸ್ಥರ ಸುರಕ್ಷತೆಗಾಗಿ ಬೆಂಬಲವನ್ನು ಕೋರುತ್ತಿದ್ದೇವೆ.” ಐಸಿಪಿಎ, ದೊಡ್ಡ ಗಾತ್ರದ ವಿಮಾನಗಳನ್ನು (wide-bodied) ನಡೆಸುವ ಪೈಲಟ್‌ ಗಳನ್ನು ಪ್ರತಿನಿಧಿಸುವ ಸಂಘಟನೆಯಾಗಿದೆ.

ವಿಮಾನಯಾನಕ್ಕೆ ಮುಂಚೆ ನಡೆಸುವ ಹಾಗೂ ನಂತರ ನಡೆಸುವ ಉಸಿರಾಟದ ಕಡ್ಡಾಯ ವಿಶ್ಲೇಷಣಾ ಪರೀಕ್ಷೆಗಳನ್ನು (breath-analyser tests) ತಾತ್ಕಾಲಿಕವಾಗಿ ನಿಲ್ಲಿಸುವಂತೆ ಐಸಿಪಿಎ ಏಪ್ರಿಲ್ 14ರಂದು ನಾಗರಿಕ ವಿಮಾನಯಾನದ ನಿರ್ದೇಶನಾಲಯಕ್ಕೆ (ಡಿಜಿಸಿಎ) ಪತ್ರವನ್ನು ಬರೆದಿತ್ತು. ಇದಕ್ಕೆ ಪ್ರತಿಯಾಗಿ ಡಿಜಿಸಿಎ ಏಪ್ರಿಲ್ 27ರಂದು ಶೇ.10ರಷ್ಟು ವಿಮಾನಗಳ ತಂಡದ ಸದಸ್ಯರುಗಳು ಹಾಗೂ ಕ್ಯಾಬಿನ್ ಸದಸ್ಯರುಗಳನ್ನು ಈ ಪರೀಕ್ಷೆಗಳಿಗೆ ಒಳಡಪಡಿಸುವುದಾಗಿ ತಿಳಿಸಿತು. ಸಾಂಕ್ರಾಮಿಕದಿಂದಾಗಿ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಎಲ್ಲಾ ಉಸಿರಾಟ ವಿಶ್ಲೇಷಣಾ ಪರೀಕ್ಷೆಗಳನ್ನು ವಜಾಗೊಳಿಸಿತ್ತು. ಆದರೆ ಪುನಃ ಸೆಪ್ಟೆಂಬರ್ ತಿಂಗಳಲ್ಲಿ ಕೋವಿಡ್‌ ನ ಮೊದಲ ಅಲೆ ಕಂಡು ಬಂದ ನಂತರ ಆರಂಭಿಸಿತು.Covid –death-person- private hospital -dead body -mysore

ನಾಗರಿಕ ವಿಮಾನಯಾನ ಇಲಾಖೆಯ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ಲೋಕಸಭೆಗೆ ಬರೆದಿರುವ ಪತ್ರಿಕ್ರಿಯೆ ಪತ್ರವೊಂದರಲ್ಲಿ ಫೆಬ್ರವರಿ 1ರಂದಿಗೆ, ಕ್ರೂ ಸದಸ್ಯರೂ ಒಳಗೊಂಡಂತೆ ಒಟ್ಟು ೧,೯೯೫ ಏರ್ ಇಂಡಿಯಾ ಉದ್ಯೋಗಿಗಳಲ್ಲಿ ಕೋವಿಡ್ ಸೋಂಕು ಕಂಡು ಬಂದಿದ್ದು, ಈ ಪೈಕಿ ೫೮೩ ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆ ಸಂದರ್ಭದಲ್ಲಿ ವಿಮಾನಯಾನದಲ್ಲಿ ಭಾಗಿಯಾಗುವ ತಂಡದ ಸದಸ್ಯರ ಪೈಕಿ ಯಾರೂ ಸಹ ಪ್ರಾಣ ಕಳೆದುಕೊಂಡಿರಲಿಲ್ಲ. ಆದರೆ 19 ಜನ ಕಚೇರಿ ಸಿಬ್ಬಂದಿಗಳು ಸೋಂಕು ಹಾಗೂ ಇತರೆ ಸಮಸ್ಯೆಗಳಿಂದಾಗಿ ಬಲಿಯಾಗಿದ್ದರು. ಹೀಗೆ ಬಲಿಯಾದ ಉದ್ಯೋಗಿಗಳ ಕುಟುಂಬಸ್ಥರಿಗೆ ತಲಾ ರೂ.10 ಲಕ್ಷ ಪರಿಹಾರ ನೀಡುವುದಾಗಿ ಜುಲೈ ೨೦೨೦ರಲ್ಲಿ ಏರ್ ಇಂಡಿಯಾ ಘೋಷಿಸಿತು.

ಈ ಕುರಿತು ಏರ್ ಇಂಡಿಯಾ ವಕ್ತಾರರನ್ನು ಮಾತನಾಡಿಸಿದಾಗ ಅವರ ಪ್ರತಿಕ್ರಿಯೆ ಈ ರೀತಿ ಇತ್ತು: “ಏರ್ ಇಂಡಿಯಾ ಮೊದಲಿಂದಿನಿಂದಲೂ ಉದ್ಯೋಗಿಗಳ ಸರುಕ್ಷತೆ ಹಾಗೂ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ. ಕೇವಲ ವಿಮಾನದಲ್ಲಿ ಹಾರಾಡುವ ಸದಸ್ಯರಷ್ಟೇ ಅಲ್ಲದೆ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳ ಬಗ್ಗೆಯೂ ಕಾಳಜಿ ಹೊಂದಿದೆ. ಎಲ್ಲಾ ಉದ್ಯೋಗಿಗಳಿಗೂ ಅದರಲ್ಲಿಯೂ ವಿಶೇಷವಾಗಿ ಮುಂಚೂಣಿ ಉದ್ಯೋಗಿಗಳಿಗೆ ವಿಮಾನ ಪ್ರಯಾಣ ಆರಂಭವಾಗುವುದಕ್ಕೆ ಮುಂಚೆ ಹಾಗೂ ನಂತರದಲ್ಲಿ 24 ಗಂಟೆಗಳ ಕಾಲವೂ ಸಹ ಆರೋಗ್ಯಕ್ಕೆ ಸಂಬಂಧಪಟ್ಟ ನೆರವನ್ನು ಒದಗಿಸಲಾಗುತ್ತದೆ. ಪ್ರಸ್ತುತ ಲಸಿಕಾ ಅಭಿಯಾನವೂ ಸಹ ನಡೆಯುತ್ತಿದ್ದು, ಭರತದಲ್ಲಿ ಲಸಿಕಾ ಅಭಿಯಾನ ಪ್ರಾರಂಭವಾದಾಗಿನಿಂದ ಎಲ್ಲಾ ಅರ್ಹ ಉದ್ಯೋಗಿಗಳಗೂ ಲಸಿಕೆಯನ್ನು ನೀಡಲಾಗುತ್ತಿದೆ. ದೆಹಲಿ ಹಾಗೂ ದೇಶದ ವಿವಿಧೆಡೆಗಳಲ್ಲಿರುವ ಇತರೆ ಕಡೆಗಳಲ್ಲಿಯೂ ಲಸಿಕಾ ಅಭಿಯಾನ ಕೈಗೊಳ್ಳಲಾಗಿದೆ.”

ಸುದ್ದಿ ಮೂಲ: ಇಂಡಿಯನ್ ಎಕ್ಸ್ಪ್ರೆಸ್

Key words: business-aviation-five-senior-air india-pilots-die= covid -vaccine-