ಬಿಟ್ ಕಾಯಿನ್ ಪ್ರಕರಣ ಸತ್ಯ ಮುಚ್ಚಿ ಹಾಕಲು ಯತ್ನ:  ಸರ್ಕಾರದ ತನಿಖೆಯಲ್ಲಿ ಪಾರದರ್ಶಕತೆ ಇಲ್ಲ- ಪ್ರಿಯಾಂಕ್ ಖರ್ಗೆ ಆರೋಪ.

ಬೆಂಗಳೂರು,ನವೆಂಬರ್,12,2021(www.justkannada.in): ಬಿಟ್ ಕಾಯಿನ್ ಪ್ರಕರಣ ಸತ್ಯ ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ. ಸರ್ಕಾರದ ತನಿಖೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದರು.

ಬೆಂಗಳೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ,  ಬಿಟ್ ಕಾಯಿನ್ ಪ್ರಕರಣ ಸಾಕ್ಷ್ಯಾನಾಶಕ್ಕೆ ಯತ್ನಿಸಿದ್ದಾರೆ. ಪ್ರಕರಣದ ಸತ್ಯಾಂಶ ಹೊರತರಲು ತನಿಖೆ ನಡೆಸುತ್ತಿಲ್ಲ. ಸತ್ಯಾಂಶ ಮುಚ್ಚಿಹಾಕಲು ಸರ್ಕಾರ ತನಿಖೆ ನಡೆಸುತ್ತಿದೆ.  ಸರ್ಕಾರದ ತನಿಖೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ಕಿಡಿಕಾರಿದರು.

ಕಸ್ಟಡಿಯಲ್ಲಿದ್ದ ಶ್ರೀಕಿಗೆ ಡ್ರಗ್ಸ್ ಸರಬರಾಜಾಗುತ್ತಿತ್ತು. ತನಿಖಾಧಿಕಾರಿಗಳೇ ಡ್ರಗ್ಸ್ ನೀಡುತ್ತಿದ್ದರು.   ಶ್ರೀಕಿ ಕಸ್ಟಡಿಯಲ್ಲಿದ್ದಾಗೂ ಡ್ರಗ್ಸ್ ಸರಬರಾಜಾಗಿದೆ. ಹೀಗೆ ಅವರ ತಂದೆಯೇ ಆರೋಪಿಸಿ ಮ್ಯಾಜಿಸ್ಟ್ರೇಟ್ ಗೆ ಅರ್ಜಿ ಸಲ್ಲಿಸಿದ್ದರು ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.

Key words: bitcoin case – trying – facts-no transparency –government- investigation-Priyank Kharge