ಭಾರತದ ಕೋವಿಡ್ ಲಸಿಕೆ ಅಭಿಯಾನಕ್ಕೆ ಬಿಲ್ ಗೇಟ್ಸ್ ಶ್ಲಾಘನೆ

Promotion

ಬೆಂಗಳೂರು, ಮೇ 29, 2022 (www.justkannada.in): ದಾವೋಸ್ (ಸ್ವಿಟ್ಜರ್ಲೆಂಡ್): ಭಾರತದಲಸಿಕೆಅಭಿಯಾನವನ್ನು ಮೈಕ್ರೋಸಾಫ್ಟ್ಸಹ-ಸಂಸ್ಥಾಪಕಬಿಲ್ಗೇಟ್ಸ್ಶ್ಲಾಘಿಸಿದ್ದಾರೆ.

ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರೊಂದಿಗೆ ನಡೆದ ಸಭೆಯಲ್ಲಿ ಬಿಲ್ ಗೇಟ್ಸ್ ಅವರು ಭಾರತದ ಲಸಿಕೆ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಡಾ. ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿಯಾಗಲು ಮತ್ತು ಜಾಗತಿಕ ಆರೋಗ್ಯದ ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಳ್ಳಲು ಇದು ಅದ್ಭುತ ಸಮಯವಾಗಿದೆ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ.

ಇನ್ನೂ, ಬಿಲ್ ಗೇಟ್ಸ್ ಅವರೊಂದಿಗೆ ಫೋಟೋಗಳನ್ನು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ʻಬಿಲ್ಗೇಟ್ಸ್ ಅವರೊಂದಿಗೆ ಸಂವಹನ ನಡೆಸಲು ಸಂತೋಷವಾಗಿದೆ ಎಂದಿದ್ದಾರೆ.