ಬೆಳಗಾವಿಯ ಗೋಕಾಕ್ ನ ಲೋಕೋಪಯೋಗಿ ಕಚೇರಿ ಸೀಲ್ ಡೌನ್….

ಬೆಳಗಾವಿ,ಜೂ,4,2020(www.justkannada.in): ಬೆಳಗಾವಿ ಜಿಲ್ಲೆ ಗೋಕಾಕ್ ನ ಲೋಕೋಪಯೋಗಿ ಕಚೇರಿಗೆ ಕೊರೋನಾ ವೈರಸ್ ಭೀತಿ ಉಂಟಾಗಿದೆ.

ಹೌದು ಕಚೇರಿಯ ಸಿಬ್ಬಂದಿಯೊಬ್ಬರು ಕರೋನಾ ಸೋಂಕಿತರ ಸಂಪರ್ಕದಲ್ಲಿದ್ದ ಹಿನ್ನೆಲೆ ಲೋಕೋಪಯೋಗಿ ಕಚೇರಿಯನ್ನ ಸೀಲ್ ಡೌನ್ ಮಾಡಲಾಗಿದೆ.  ಮುಂಜಾಗ್ರತಾ ಕ್ರಮವಾಗಿ ಲೊಕೋಪಯೋಗಿ ಕಚೇರಿಯ 14 ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ.belagavi-gokak-PWD office- Seal down –corona virus

ಲಾಕ್ ಡೌನ್ ಸಡಿಲಗೊಳಿಸಿದ ಬಳಿಕ ವ್ಯಾಪಾರ ವಹಿವಾಡು ಸಾರಿಗೆ ಎಲ್ಲಾ ಆರಂಭವಾಗಿದ್ದು ಜನ ಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಈ ಮಧ್ಯೆ ರಾಜ್ಯದಲ್ಲಿ ಕರೋನಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

Key words: belagavi-gokak-PWD office- Seal down –corona virus