ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಸಫಾರಿ ಕೌಂಟರ್ ಸ್ಥಳಾಂತರ

ಚಾಮರಾಜನಗರ, ಜೂನ್ 02, 2019 (www.justkannada.in): ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಸಫಾರಿ ಕೌಂಟರ್ ಸ್ಥಳಾಂತರ ಮಾಡಲಾಗಿದೆ.

ಬಂಡಿಪುರ ಕ್ಯಾಂಪ್ ನಿಂದ ಪ್ರವೇಶ ದ್ವಾರದ ಮೇಲುಕಾಮನ ಹಳ್ಳಿಗೆ ಶಿಫ್ಟ್ ಮಾಡಲಾಗಿದೆ. ಮೇಲು ಕಾಮನಹಳ್ಳಿ ಬಳಿ ನೂತನ ಸಫಾರಿ ಕೌಂಟರ್ ತೆರೆಯಲಾಗಿದೆ.  ಇಂದಿನಿಂದ ನೂತನ ಕೌಂಟರ್ ನಿಂದ ಸಫಾರಿ ಆರಂಭಿಸಲಾಗಿದೆ.

ಬಂಡಿಪುರ ಅರಣ್ಯ ಪ್ರದೇಶದೊಳಗಿದ್ದ ಸಫಾರಿ ಕೌಂಟರ್, ಜನ ದಟ್ಟಣೆ ಹೆಚ್ಚಾದ ಹಿನ್ನೆಲೆ ಸ್ಥಳಾಂತರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕಾಟೇಜ್ ಮತ್ತು ಅರಣ್ಯ ಇಲಾಖಾ ಕಚೇರಿ ಸ್ಥಳಾಂತರಕ್ಕೆ ಚಿಂತನೆ ನಡೆಸಲಾಗಿದೆ.

ಕಾಡು ಪ್ರಾಣಿಗಳಿಗೆ ಯಾವುದೇ ತೊಂದರೆ ಆಗದಂತೆ ಅರಣ್ಯ ಅಧಿಕಾರಿಗಳಿಂದ ಹೊಸ ಬದಲಾವಣೆ ಮಾಡಲಾಗಿದ್ದು, ಬಂಡಿಪುರದಿಂದ ಹಳೇ ಸಫಾರಿ ಕೌಂಟರ್ ಸ್ಥಳದಿಂದ ೩ ಕಿ.ಮಿ ಹಿಂದಕ್ಕೆ ಸಫಾರಿ ಕೌಂಟರ್ ಅನ್ನು ಅಧಿಕಾರಿಗಳು ಸ್ಥಳಾಂತರ ಮಾಡಿದ್ದಾರೆ.

ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ಅವರಿಂದ ಸ್ಥಳಾಂತರಗೊಂಡ ಕೌಂಟರ್ ಗೆ ಚಾಲನೆ ನೀಡಿದ್ದಾರೆ. ಸಿ.ಎಫ್.ಬಾಲಚಂದರ್, ಎಸಿ.ಎಫ್ ಗಳಾದ ರವಿಕುಮಾರ್, ನಟರಾಜ್, ಆರ್.ಎಫ್.ಓ.ಶ್ರೀನಿವಾಸ್ ಸೇರಿದಂತೆ ಅರಣ್ಯಾಧಿಕಾರಿಗಳು ಸಿಬ್ಬಂದಿಗಳು ಭಾಗಿಯಾಗಿದ್ದರು.