ಗಣಿನಾಡು ಬಳ್ಳಾರಿಯಲ್ಲಿ ಶತಕ ದಾಟಿದ ಕೊರೋನಾ ಸೋಂಕಿತರು: ಇಂದು ಮತ್ತೆ 34 ಜನರಲ್ಲಿ ಪಾಸಿಟಿವ್….

ballari-corona-virus-jindal-company
Promotion

ಬಳ್ಳಾರಿ:ಜೂ.11, 2020(www.justkannada.in):  ಮೂವತ್ತು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ತೋರಣಗಲ್ಲಿನ ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆಯಲ್ಲಿ  ಈ ತಿಂಗಳ ಮೂರರವರೆಗೆ ಒಂದೇ ಒಂದು ಕೊರೊನಾ ಸೋಂಕು ಹೊಂದಿದವರು ಇರಲಿಲ್ಲ. ಆದರೆ ಕಳೆದ ಒಂದು ವಾರದಲ್ಲಿ  ಇಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಮತ್ತು ಅವರ ಸಂಬಂಧಿಕರು ಸೇರಿ 86ಕ್ಕೂ ಹೆಚ್ಚು ಜನರಲ್ಲಿ ಕೋವಿಡ್ -19 ಸೋಂಕು ಕಾಣಿಸಿಕೊಂಡಿದೆ. ಇದರಿಂದ ಜಿಂದಾಲ್  ಉಕ್ಕು ಕಾರ್ಖಾನೆಯಲ್ಲಿ ಕೊರೊನಾದ ಅಬ್ಬರ ಹೆಚ್ಚತೊಡಗಿದೆ.ballari-corona-virus-jindal-company

ಇಂದು ಜಿಲ್ಲೆಯ 34 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು. ಅವರಲ್ಲಿ 46 ಜನರು  ಜಿಂದಾಲ್ ಸೋಂಕಿತನ ಸಂಪರ್ಕ ಪಡೆದವರಾಗಿದ್ದಾರೆ. ಐದು ಜನರು ಮುಂಬೈನಿಂದ ಬಂದವರಾಗಿದ್ದಾರೆ. ಉಳಿದಂತೆ ಮತ್ತೊಬ್ಬರು ಬಳ್ಳಾರಿಯ ಶ್ರೀ ಸಾಯಿ ನಗರಕ್ಕೆ ಸೇರಿದವರಾಗಿದ್ದಾರೆ. ಮತ್ತೊಬ್ಬರು ಹೊಸಪೇಟೆ ನಗರದವರಾಗಿದ್ದಾರೆ. ಸೋಂಕಿತ ಎಲ್ಲರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕರೆತರಲಾಗಿದೆ. ಅವರ ಸಂಪರ್ಕಿತರನ್ನು ಹುಡುಕುವ ಕಾರ್ಯ ನಡೆದಿದೆ ಎಂದು ಜಿಲ್ಲಾಧಿಕಾರಿ ನಕುಲ್ ಅವರು ಹೇಳಿದ್ದಾರೆ.

ಜಿಂದಾಲ್ ಕಾರ್ಖಾನೆ ಪ್ರದೇಶದಲ್ಲಿ ಸೋಂಕು ಹೆಚ್ಚಾಗಿ ಹರಡುತ್ತಿರುವುದರಿಂದ 10 ಕಂಟೈನ್ ಮೆಂಟ್ ಪ್ರದೇಶಗಳನ್ನು ಸೃಷ್ಟಿ ಮಾಡಿದೆ. ಅಲ್ಲದೆ ಜಿಂದಾಲ್ ಉಕ್ಕುಕಾರ್ಖಾನೆಯ ಸಿಎಂಡಿ ವಿಭಾಗದಲ್ಲಿನ ಶೇ 95 ರಷ್ಟು ಸಿಬ್ಬಂದಿಯನ್ನು ಐದು ದಿನಗಳ ಕಾಲ ಮನೆಯಲ್ಲಿಯೇ ಇರಲು. ಮತ್ತು ಕೊರೆಕ್ಸ್ ಘಟಕದಲ್ಲೂ ಕನಿಷ್ಟ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಜಿಲ್ಲಾಡಳಿತ ಸೂಚಿಸಿದೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದೆ.

ಸಂಚಾರಿ ಸ್ವಾಬ್ ಲ್ಯಾಬ್

ಜಿಂದಾಲ್ ಕಾರ್ಖಾನೆಯಲ್ಲಿ ಹೆಚ್ಚುತ್ತಿರೋ ಸೋಂಕಿತರ ಸಂಖ್ಯೆ ಹಿನ್ನಲೆಯಲ್ಲಿ ವಿಶೇಷವಾಗಿ ವಿನ್ಯಾಸ ಮಾಡಿರುವ ಸ್ವಾಬ್ (ಗಂಟಲು ದ್ರವ) ಸಂಗ್ರಹದ ಲ್ಯಾಬ್ ನ್ನು ಹೊಂದಿರುವ  ಬಸ್ ಗೆ ಇಂದು ಜಿಲ್ಲಾಧಿಕಾರಿಗಳು ಚಾಲನೆ ನೀಡಿದ್ದಾರೆ. ಈ ಬಸ್ ನ ಲ್ಯಾಬ್ ನಲ್ಲಿ ಸ್ವ್ಯಾಬ್ ಟೆಸ್ಟಿಂಗ್ ಮಾಡಿ 24ಗಂಟೆಯೊಳಗೆ ರಿಪೋರ್ಟ್ ಕೊಡಲು ವ್ಯವಸ್ಥೆ‌ ಮಾಡಿದೆ.

ಟೆಸ್ಟ್ ಜೊತೆಗೆ ಒಂದು ಬೆಡ್ ಮತ್ತು ವೈದ್ಯರಿಗಾಗಿ ಪ್ರತ್ಯೇಕ ಛೇಂಬರ್‌ ವ್ಯವಸ್ಥೆ ಇದರಲ್ಲಿದೆ. ಜಿಂದಾಲ್‌ ಆವರಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಯಲ್ಲಿ ಸಹ ಈ ಸಂಚಾರಿ  ಲ್ಯಾಬ್ ಓಡಾಡಲಿದೆ.

Key words:  ballari- corona  virus- jindal-company