ತಂದೆಯಾಗುವ ಖುಷಿಯಲ್ಲಿದ್ದಾರೆ ಅಜಿಂಕ್ಯಾ ರಹಾನೆ !

Promotion

ಬೆಂಗಳೂರು, ಜುಲೈ 31, 2019 (www.justkannada.in): ಕ್ರಿಕೆಟಿಗ ಅಜಿಂಕ್ಯ ರಹಾನೆ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ.

ಹೌದು. ರಹಾನೆ ತಂದೆಯಾಗಲಿದ್ದಾರೆ.ಇನ್ಸ್ಟ್ರಾಗ್ರಾಮ್ ನಲ್ಲಿ ರಹಾನೆ ಈ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇನ್ಸ್ಟ್ರಾಗ್ರಾಮ್ ಖಾತೆಯಲ್ಲಿ ರಹಾನೆ, ಪತ್ನಿ ರಾಧಿಕಾ ಜೊತೆಗಿರುವ ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ಫೋಟೋ ಮಡಿಲು ತುಂಬುವ ಶಾಸ್ತ್ರದಲ್ಲಿ ತೆಗೆದ ಫೋಟೋವನ್ನು ರಹಾನೆ ಪೋಸ್ಟ್ ಮಾಡಿದ್ದಾರೆ. ರಹಾನೆ ಜುಲೈ 16ರವರೆಗೆ ಇಂಗ್ಲೆಂಡ್ ನಲ್ಲಿ ಕೌಂಟಿ ಕ್ರಿಕೆಟ್ ಆಡಿದ್ದು, ಈಗ ಭಾರತಕ್ಕೆ ವಾಪಸ್ ಆಗಿದ್ದಾರೆ.