ನಟಿ ಸಂಜನಾ ಗಲ್ರಾನಿಗೆ ಸೀಮಂತ ಶಾಸ್ತ್ರದ ಸಂಭ್ರಮ

Promotion

ಬೆಂಗಳೂರು, ಮೇ 12, 2022 (www.justkannada.in): ನಟಿ ಸಂಜನಾ ಗಲ್ರಾನಿ ತುಂಬು ಗರ್ಭಿಯಾಗಿದ್ದು, ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ವಿಶೇಷ ಎಂದರೆ ಈ ಬೋಲ್ಡ್ ನಟಿ ಸಂಜನಾ ತಮ್ಮ ಚೊಚ್ಚಲ ಮಗುವಿನ ಸೀಮಂತದ ಪೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಎರಡೆರಡು ಬಾರಿ ಸೀಮಂತ ಕಾರ್ಯ ಮಾಡಿಸಿಕೊಂಡಿರುವ ಸಂಜನಾ ತಮ್ಮ ಮುದ್ದಿನ ಮಗುವಿನ ಬರುವಿಕೆಗಾಗಿ ಕಾತುರರಾಗಿದ್ದಾರೆ.

ಬಿಳಿ ಬಣ್ಣದ ಲೆಹೆಂಗಾದಲ್ಲಿ ಥೇಟ್‌ ಮುಸ್ಲಿಂ ಹೆಣ್ಣು ಮಗಳಂತೆ ಕಂಗೊಳಿಸುತ್ತಿದ್ದರು. ಇನ್ನು ಪತಿ ಅಜೀಜ್ ಕೂಡ ಬಿಳಿ ಬಣ್ಣದ ಶೇರ್ವಾನಿ ಧರಿಸಿ ಮಿಂಚಿದ್ದರು.

ಸದ್ಯ ನಟಿ ಸಂಜನಾ ಮುಸ್ಲಿಂ ಸಂಪ್ರದಾಯದಂತೆ ಅದ್ಧೂರಿಯಾಗಿ ಸೀಮಂತ ಕಾರ್ಯ ಮಾಡಿಸಿಕೊಂಡಿದ್ದಾರೆ.

ಬೆಂಗಳೂರಿನ ಇಂದಿರಾ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಬಹಳ ಅದ್ದೂರಿಯಾಗಿ ಸಂಜನಾ ಸೀಮಂತ ಕಾರ್ಯ ನಡೆದಿದೆ.  ಕಾರ್ಯಕ್ರಮದಲ್ಲಿ ಹಲವು ಸೆಲೆಬ್ರೆಟಿಗಳು ಭಾಗಿಯಾಗಿದ್ದಾರೆ.