ಅಭಿಮಾನಿಗಳೊಂದಿಗೆ ಹುಟ್ಟಿದ ಹಬ್ಬ ಆಚರಿಸಿಕೊಂಡ ನಟಿ ರಾಧಿಕಾ ಕುಮಾರಸ್ವಾಮಿ

Promotion

ಬೆಂಗಳೂರು, ನವೆಂಬರ್ 11, 2023 (www.justkannada.in): ಇಂದು ನಟಿ ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬ. ತಮ್ಮ ಹುಟ್ಟುಹಬ್ಬವನ್ನು ಫ್ಯಾನ್ಸ್ ಜೊತೆ ನಟಿ ಆಚರಿಸಿಕೊಳ್ಳುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದ ರಾಧಿಕಾ ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳನ್ನು ಆಹ್ವಾನಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಬರ್ತ್‌ಡೇ ಆಚರಣೆಯಿಂದ ದೂರವಿದ್ದೆ, ಈ ಬಾರಿ ಎಲ್ಲರೊಂದಿಗೆ ಬರ್ತ್ ಡೇ ಆಚರಿಸಿಕೊಳ್ಳುವುದಾಗಿ ತಿಳಿಸಿದ್ದರು.

ನನ್ನ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತೇನೆ. ಅಂದು ನಿಮಗೆ ಸಿಗುತ್ತೇನೆ ಎಂದು ಹೇಳಿದ್ದ ರಾಧಿಕಾ ಕುಮಾರಸ್ವಾಮಿ ಅವರು ಅಭಿಮಾನಿಗಳಿಗೆ ತಮ್ಮ ಮನೆಯ ವಿಳಾಸವನ್ನು ನೀಡಿದ್ದರು.

ಹಲವು ವರ್ಷಗಳಿಂದ ಅಭಿಮಾನಿಗಳನ್ನ ಭೇಟಿ ಮಾಡೋಕೆ ಆಗಿರಲಿಲ್ಲ. ಈಗ ಎಲ್ಲರನ್ನು ನೋಡಲು ಕಾತರದಿಂದ ಕಾಯುತ್ತಿದ್ದೇನೆ ಎಂದು ರಾಧಿಕಾ ವಿಡೀಯೋದಲ್ಲಿ ಹೇಳಿಕೊಂಡಿದ್ದರು.