ಎರಡು ಸಾವಿರ ಪಕ್ಷಿಗಳಿಗೆ ಆಹಾರ ನೀಡುವ ನವರಸ ನಾಯಕ !

ಬೆಂಗಳೂರು, ಜೂನ್ 06, 2019 (www.justkannada.in): ನವರಸನಾಯಕ ಜಗ್ಗೇಶ್ ಹಲವು ಸಮಾಜ ಮುಖಿ ಕೆಲಸಗಳು ಆಗಾಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗವಾಗುತ್ತದೆ.

ಇದೀಗ ಜಗ್ಗೇಶ್ ತಮಗಿರುವ ಪಕ್ಷಿ ಪ್ರೇಮದ ಬಗ್ಗೆ ಬರೆದುಕೊಂಡಿದ್ದಾರೆ. ಜಗ್ಗೇಶ್ ಬಳಿ 7 ಜಾತಿಯ ಸುಮಾರು 2000 ಪಕ್ಷಿಗಳಿವೆಯಂತೆ! ಮೇವು ಹುಡುಕಿಕೊಂಡು ಬಂದ ಈ ಪಕ್ಷಿಗಳಿಗೆ ಜಗ್ಗೇಶ್ ಪ್ರತಿ ನಿತ್ಯ 8 ಕೆಜಿ ಧಾನ್ಯ ಆಹಾರವಾಗಿ ಕೊಡುತ್ತಿದ್ದಾರಂತೆ.

ಅದನ್ನು ಕೊಡುವುದಕ್ಕೆಂದೇ ವ್ಯಕ್ತಿಯೊಬ್ಬನನ್ನು ನೇಮಿಸಿದ್ದಾರಂತೆ. ಮೇವು, ಮರ ಎಲ್ಲಿ ಸಿಗುತ್ತದೋ ಅಲ್ಲಿಗೆ ಹಕ್ಕಿಗಳು ಹುಡುಕಿಕೊಂಡು ಬರುತ್ತವೆ. ಈ ರೀತಿ ಪರಿಸರದ ಮಡಿಲಲ್ಲಿ ಇರುವುದು ನನಗಿಷ್ಟ. ಈ ಪಕ್ಷಿಗಳೇ ನನ್ನ ಪ್ರಾಣ ಎಂದು ಜಗ್ಗೇಶ್ ‍ಬರೆದುಕೊಂಡಿದ್ದಾರೆ.