ರಾಜ್ಯದಲ್ಲಿ ಇಂದು ಹೊಸದಾಗಿ 2479 ಕೋವಿಡ್ ಪ್ರಕರಣಗಳು ಪತ್ತೆ.

ಬೆಂಗಳೂರು,ಜನವರಿ,4,2022(www.justkannada.in):  ರಾಜ್ಯದಲ್ಲಿ ಕೋವಿಡ್ 3ನೇ ಅಲೆ ಭೀತಿ ಎದುರಾಗಿದ್ದು,  ಇಂದು ಹೊಸದಾಗಿ  2,479 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

ಈ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಅದೇ ರೀತಿ ಇಂದು ಕೊರೊನಾ ಸೋಂಕಿಗೆ ನಾಲ್ವರು ಬಲಿ ಆಗಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇಕಡಾ 2.59ರಷ್ಟಿದೆ. ಎಂದು ಸಚಿವ ಡಾ.ಸುಧಾಕರ್​ ಮಾಹಿತಿ ನೀಡಿದ್ದಾರೆ.

file photo

ಬೆಂಗಳೂರು ನಗರದಲ್ಲೇ ಹೊಸದಾಗಿ 2,053 ಕೊರೊನಾ ಪ್ರಕರಣಗಳು ಪತ್ತೆ ಆಗಿದೆ. ಆ ಮೂಲಕ, ಬೆಂಗಳೂರಿನಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆ 2 ಸಾವಿರ ಗಡಿ ದಾಟಿದಂತಾಗಿದೆ. ಬೆಂಗಳೂರಿನಲ್ಲಿ 24 ಗಂಟೆಯಲ್ಲಿ ಕೊರೊನಾ ಕೇಸ್​ ದ್ವಿಗುಣವಾಗಿದೆ. ನಿನ್ನೆ 1 ಸಾವಿರದಷ್ಟಿದ್ದ ಕೊರೊನಾ ಕೇಸ್​ ಇಂದು 2 ಸಾವಿರ ತಲುಪಿದೆ.

Key words: total – 2479 new cases – covid – detected – state- today.