ಮೈಸೂರು ಡಿಸಿಪಿ ಪ್ರದೀಪ್ ಗುಂಟಿ ಅವರಿಂದ ಆಮ್ಲಜನಕ ಘಟಕ ಉದ್ಘಾಟನೆ.

ಮೈಸೂರು,ನವೆಂಬರ್,11,2021(www.justkannada.in):   ಮೈಸೂರಿನ ಮಂಡಿ ಮೊಹಲ್ಲಾದ ಸಾಡೇ ರಸ್ತೆಯಲ್ಲಿರುವ ಸಿ.ಎಸ್.ಐ ಹೋಲ್ಡ್ಸ್ ವರ್ತ್ ಮೆಮೋರಿಯಲ್ ಮಿಷನ್ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕ(oxygen plant) ವನ್ನ  ಮೈಸೂರು ಡಿಸಿಪಿ ಪ್ರದೀಪ್ ಗುಂಟಿ ಉದ್ಘಾಟಿಸಿದರು.

ಆಮ್ಲಜನಕ ಘಟಕ ಉದ್ಘಾಟಿಸಿದ ಬಳಿಕ ಮಾತನಾಡಿದ ಡಿಸಿಪಿ ಪ್ರದೀಪ್ ಗುಂಟಿ, ಸಿ.ಎಸ್.ಐ ಮಿಷನ್ ಆಸ್ಪತ್ರೆಯಲ್ಲಿ ಉತ್ತಮ ಮೂಲಭೂತ ಸೌಲಭ್ಯಗಳನ್ನು  ಕಲ್ಪಿಸಿಕೊಡುವ ಮೂಲಕ ರೋಗಿಗಳಿಗೆ ಸಮರ್ಪಕ ವೈದ್ಯಕೀಯ ಸೇವೆ ನೀಡಲು ಆಕ್ಸಿಜನ್ ಪ್ಲಾಂಟ್ ಅಂತಹ ಅಭಿವೃದ್ಧಿ ಕೆಲಸಗಳು ಮಾಡಿರುವುದು ಸಹಕಾರಿಯಾಗಲಿದೆ.ಕಳೆದ ಕೋವಿಡ್ ಸಂದರ್ಭದಲ್ಲಿ ಮಿಷನ್ ಆಸ್ಪತ್ರೆ ವೈದ್ಯ ಸಿಬ್ಬಂದಿವರ್ಗ ಹಗಲಿರುಳು ಜನಸಾಮನ್ಯರನ್ನ ಸೋಂಕಿನಿಂದ ಗುಣಪಡಿಸಲು ಶ್ರಮಿಸಿದ್ದಾರೆ ಎಂದರು.

ನಂತರ ಸಿ.ಎಸ್.ಐ ಹೋಲ್ಡ್ಸ್ ವರ್ತ್ ಮೆಮೋರಿಯಲ್ ಮಿಷನ್ ಆಸ್ಪತ್ರೆ ನಿರ್ದೇಶಕ ವಿನ್ಸೆಂಟ್ ಪಾಲಣ್ಣ  ಅವರು, ಮೈಸೂರಿನಲ್ಲಿ ಕಡುಬಡ ಕುಟುಂಬಗಳಲ್ಲಿ ಕ್ಯಾನ್ಸರ್ ಖಾಯಿಲೆ ಲಕ್ಷಣ ಕಾಣಿಸಿಕೊಂಡರೆ ಗುಣಮುಖರಾಗಲು ಚಿಕಿತ್ಸೆ ಪಡೆಯಲು ಭಯಪಡುವ ಸಮಸ್ಯೆಯನ್ನು ಬಗೆಹರಿಸಲೆಂದೆ ಸಿ.ಎಸ್.ಐ ಹೋಲ್ಡ್ಸ್ ವರ್ತ್ ಮೆಮೋರಿಯಲ್ ಮಿಷನ್ ಆಸ್ಪತ್ರೆಯಲ್ಲಿ ಮುಂದಿನ ದಿನದಲ್ಲಿ ಕ್ಯಾನ್ಸರ್ ಗುಣಮುಖ  ತಪಾಸಣೆ ಮತ್ತು ಚಿಕಿತ್ಸಾ ಘಟಕ ಪ್ರಾರಂಭಿಸಲಾಗುತ್ತಿದ್ದು ಇದರ ಸದುಪಯೋಗ ಪಡೆದು ಮೈಸೂರಿನ ನಾಗರೀಕರು ಆರೋಗ್ಯದಿಂದಿರಬಹುದು ಎಂದರು.

ಸಿಎಸ್.ಐ ಬಿಷಪ್ ಮೋಹನ್ ಮನೋರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಸಿದ್ದರು.  ಸಾರ್ವಜನಿಕ ಆರೋಗ್ಯ ಇಲಾಖೆಯ ನಿರ್ದೇಶಕ  ಡಾ. ಮಹೇಶ್ ಶ್ರೀನಿವಾಸ್, ಸಿಎಸ್‍ಐ – ಉಪಾಧ್ಯಕ್ಷೆ ರೆ.ಸಿಸ್ಟರ್ ಸುಜಾತ, ಕಾರ್ಯದರ್ಶಿ ವಿಲಿಯಂ ಕೇರಿ, ಔಷಧಿ ವಿಭಾಗದ ಮುಖ್ಯಸ್ಥರಾದ ಡಾ. ಮೋಹನ್ ಕುಮಾರ್, ಡಾ. ಪ್ರೇಮ ಸರೋಜಿನಿ, ಡಾ. ರುಬೇನ್ ಪ್ರಕಾಶ್, ನಿರ್ದೇಶಕಿ ಡಾ.ಜೆ.ಸುಗುಣ ಶಾಂತಿ, ಉಪ ನಿರ್ದೇಶಕ ಡಾ.ರುಬೇನ್ ಪ್ರಕಾಶ್, ರೇವ್ ಪಿ. ಗುರುಶಾಂತ, ಡಾ. ಬಿಎಸ್ ವೀರಪ್ಪ, ದಿಲೀಪ್  ಸೇರಿದಂತೆ ಆಸ್ಪತ್ರೆ ವೈದ್ಯರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Key words: mysore-Opening- CSI Holdsworth Memorial Mission Hospital- Oxygen Unit – DCP- Pradeep Gunty.