ಝೀ ಕನ್ನಡದಲ್ಲಿ ಈ ವಾರಾಂತ್ಯದಿಂದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ !

ಬೆಂಗಳೂರು, ಜುಲೈ 19, 2019 (www.justkannada.in): ಜೀ ಕನ್ನಡ ವಾಹಿನಿಯ ಡಾನ್ಸ್‌ ಕರ್ನಾಟಕ ಡಾನ್ಸ್‌ ಕಾರ್ಯಕ್ರಮ ಈ ವಾರಾಂತ್ಯದಿಂದ ಮತ್ತೆ ಶುರುವಾಗಲಿದೆ.

ಈ ಶನಿವಾರದಿಂದ ಕಮಲಿ, ಗಟ್ಟಿಮೇಳ, ಬ್ರಹ್ಮಗಂಟು, ಜೋಡಿ ಹಕ್ಕಿ, ರಾಧಾ ಕಲ್ಯಾಣ, ಮಹಾದೇವಿ, ಪಾರು, ಉಘೆ ಉಘೆ ಮಹಾದೇಶ್ವರ ಧಾರಾವಾಹಿಗಳ ನಟ-ನಟಿಯರು ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸರಿಗಮಪ, ಡ್ರಾಮಾ ಜೂನಿಯರ್ಸ್ ಸೀಸನ್ 2 ಮತ್ತು ಕಾಮಿಡಿ ಕಿಲಾಡಿಗಳು ಸೀಸನ್ 3 ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡವರೂ ಇದರಲ್ಲಿ ಇರಲಿದ್ದಾರೆ.

ರಕ್ಷಿತಾ, ವಿಜಯ ರಾಘವೇಂದ್ರ ಮತ್ತು ಅರ್ಜುನ್ ಜನ್ಯ ತೀರ್ಪುಗಾರರು. ನಿರೂಪಕಿಯ ಕೆಲಸ ಅನುಶ್ರೀ ಅವರದ್ದು.