ಯುವರಾಜ್ ವೇಣುಗೋಪಾಲ್ ಭೇಟಿ ಬಗ್ಗೆ ತನಿಖೆಯಾಗೋದು ಬೇಡ್ವ? : ದಿನೇಶ್ ಗುಂಡೂರಾವ್ ಗೆ ಸಚಿವ ಕೆ.ಎಸ್.ಈಶ್ವರಪ್ಪ ಟಾಂಗ್

ಮೈಸೂರು,ಜನವರಿ,11,2021(www.justkannada.in) : ಯುವರಾಜ್ ವೇಣುಗೋಪಾಲ್ ಭೇಟಿ ಬಗ್ಗೆ ತನಿಖೆಯಾಗೋದು ಬೇಡ್ವ? ಎಲ್ಲವನ್ನು ರಾಜಕೀಯವಾಗೆ ನೋಡಬಾರದು. ಪಕ್ಷಾತೀತಿವಾಗಿ ಇದನ್ನ ನೋಡಬೇಕು. ಯುವರಾಜ್ ರಂತಹ ಹಲಾಲ್ ಟೋಪಿಗಳು, 420ಗಳ ವಿಚಾರದಲ್ಲಿ ರಾಜಕೀಯವನ್ನ ಹುಡುಕಬಾರದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ದಿನೇಶ್ ಗುಂಡೂರಾವ್ ಗೆ ಟಾಂಗ್ ನೀಡಿದರು.jk-logo-justkannada-mysore

ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಯುವರಾಜ್ ಬಿಜೆಪಿಯವರ ಭೇಟಿಯಾಗಿದ್ದಾನೆ ಈ ಬಗ್ಗೆ ತನಿಖೆಯಾಗಬೇಕು ಎಂಬುದಕ್ಕೆ ಕಿಡಿಕಾರಿದ್ದಾರೆ.

ಯುವರಾಜ್ ಎಂಬಾತನ ಮುಖವನ್ನು ನಾನು ಟಿವಿಯಲ್ಲೆ ನೋಡಿದ್ದು. ಜೀವಂತವಾಗಿ ನಾನು ಆತನ ಮುಖ ನೋಡಿಲ್ಲ. ಬಹಳ ಬುದ್ದಿವಂತಿಕೆಯಿಂದ ಅನೇಕರಿಗೆ ಮೋಸ ಮಾಡಿದ್ದಾನೆ. ಈ ರೀತಿ ಒಬ್ಬೊಬ್ಬರು ಇರುತ್ತಾರೆ. ವೇಣುಗೋಪಾಲ್ ಆದಿಯಾಗಿ ಎಲ್ಲಾ ಪಕ್ಷದವರನ್ನು ಈತ ಭೇಟಿ ಮಾಡಿದ್ದಾನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಮಂತ್ರಿ ಮಾಡ್ತಿವಿ ಅಂದ್ರೆ ಯತ್ನಾಳ್ ಒಪ್ಪಿಕೊಳ್ಳಬೇಕು

ಯಡಿಯೂರಪ್ಪನವರ ಸಂಪುಟದಲ್ಲಿ ಮಂತ್ರಿಯಾಗಲ್ಲ ಅಂತ ಯತ್ನಾಳ್ ಹೇಳಿದ್ದಾರೆ. ಮಂತ್ರಿ ಮಾಡುವುದಿಲ್ಲ ಅಂತ ಹೇಳಿದ್ದಾರೆ. ಅವರನ್ನ ಮಂತ್ರಿ ಮಾಡುವುದು ಬಿಡುವುದು ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು.  ಒಂದು ವೇಳೆ ಕೇಂದ್ರ ನಾಯಕರು ಹಾಗೂ ಮುಖ್ಯಮಂತ್ರಿಗಳು ಮಂತ್ರಿ ಮಾಡ್ತಿವಿ ಅಂದ್ರೆ ಅದನ್ನ ಅವರು ಒಪ್ಪಿಕೊಳ್ಳಬೇಕು ಎಂದರು.Yuvraj-Venugopal-About-visit-investigated-need-Dinesh Gundurao-Minister-K.S.Eshwarappa

ಯತ್ನಾಳ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಕೆಲವು ಬಾರಿ ಅವರು ಬಹಿರಂಗವಾಗಿ ಏನೇನೋ ಟೀಕೆ ಮಾಡಿಬಿಡುತ್ತಾರೆ.  ಇದು ತಪ್ಪು ಇದರ ಬಗ್ಗೆ ನಾವು ಹೇಳಿದ್ದೇವೆ. ಆದರೆ, ಮಂತ್ರಿ ಮಾಡಬೇಕು ಅಂತ ನಿರ್ಧಾರ ಕೈಗೊಂಡರೆ ಅವರು ಒಪ್ಪಿಕೊಳ್ಳಬೇಕು. ಅವರನ್ನ ಮಂತ್ರಿ ಮಾಡ್ತಾರ ಇಲ್ಲವ ಎಂಬುದು ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

key words : Yuvraj-Venugopal-About-visit-investigated-need-Dinesh Gundurao-Minister-K.S.Eshwarappa