ನಂದಿಬೆಟ್ಟದ ಸುತ್ತಲೂ ‘ಯುವರತ್ನ’ ಶೂಟಿಂಗ್

ಬೆಂಗಳೂರು, ನವೆಂಬರ್ 13, 2019 (www.justkannada.in): ಯುವರತ್ನ ಚಿತ್ರತಂಡ ನಂದಿ ಬೆಟ್ಟದ ಸುತ್ತಮುತ್ತ ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ.

ಉದ್ಯಾನ ನಗರಿಯ ವಿವಿಧ ಸ್ಥಳಗಳಲ್ಲಿ ಕೆಲ ದೃಶ್ಯಾವಳಿಗಳನ್ನು ಸೆರೆಹಿಡಿಯಲಾಗುತ್ತಿದೆ.

ಪವರ್ ಸ್ಟಾರ್ ಜೊತೆಗೆ ಚಿತ್ರೀಕರಣದಲ್ಲಿ ಪ್ರಕಾಶ್ ರಾಜ್, ದಿಗಂತ್ ಮತ್ತು ಸೋನು ಗೌಡ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಈಗ ಪೋಸ್ಟ್-ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿರುವ ಈ ತಂಡವು ಮುಂದೆ ಹಾಡಿನ ಚಿತ್ರೀಕರಣ ಕೈಗೆತ್ತಿಕೊಳ್ಳಲಿದೆ.

2020ರಲ್ಲಿ ಬಿಡುಗಡೆಯಾಗಲಿರುವ ಚಿತ್ರ ‘ರಾಜಕುಮಾರರ’ ಚಿತ್ರದ ಯಶಸ್ವಿ ಜೋಡಿಯ ಎರಡನೇ ಚಿತ್ರವಾಗಿರಲಿದೆ.