ಏ.1ರಂದು ಅಮೆರಿಕಾದಲ್ಲೂ ‘ಯುವರತ್ನ’ ರಿಲೀಸ್

ಬೆಂಗಳೂರು, ಮಾರ್ಚ್ 26, 2021 (www.justkannada.in): ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾ ಅಮೆರಿಕಾದಲ್ಲೂ ಬಿಡುಗಡೆಯಾಗಲಿದೆ.

ಏಪ್ರಿಲ್ 1 ರಂದೇ  ವೀಕೆಂಡ್ ಸಿನಿಮಾಸ್ ಸಂಸ್ಥೆ ಉತ್ತರ ಅಮೆರಿಕಾದಲ್ಲಿ ಸಿನಿಮಾ ರಿಲೀಸ್ ಮಾಡಲು ಸಿದ್ಧತೆ ನಡೆಸಿದೆ.

ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಈ ಸಿನಿಮಾ ಬಿಡುಗಡೆಯಾಗಲಿದೆ. ಕರ್ನಾಟಕದಲ್ಲಿ ಸುಮಾರು 400 ಥಿಯೇಟರ್ ಗಳಲ್ಲಿ ಹಾಗೂ ಆಂಧ್ರಪ್ರದೇಶದಲ್ಲಿ 200 ಥಿಯೇಟರ್ ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.