ಪ್ಲಾಸ್ಟಿಕ್‌ ಮುಕ್ತ ಅಭಿಯಾನಕ್ಕೆ ಯುವಜನರು ಕೈ ಜೋಡಿಸಬೇಕು-ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್.

kannada t-shirts

ಮೈಸೂರು,ಜೂನ್,8,2022(www.justkannada.in): ಪ್ಲಾಸ್ಟಿಕ್‌ ಮುಕ್ತ ಅಭಿಯಾನಕ್ಕೆ ಯುವಜನರು ಕೈ ಜೋಡಿಸಬೇಕು. ಯುವಶಕ್ತಿ ಮನಸ್ಸು ಮಾಡಿದರೆ ಈ ಕೆಲಸ ಸುಲಭ ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ. ಹೇಮಂತಕುಮಾರ್‌ ತಿಳಿಸಿದರು.

ಮಾನಸಗಂಗೋತ್ರಿಯಲ್ಲಿ ಮೈಸೂರು ವಿವಿ ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳ ವೇದಿಕೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ “ಪ್ಲಾಸ್ಟಿಕ್ ಮುಕ್ತ ಗಂಗೋತ್ರಿ ಅಭಿಯಾನಕ್ಕೆ ಸಸಿ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡುತ್ತಾ ಪ್ಲಾಸ್ಟಿಕ್‌ ನ ಬಳಕೆ ಮತ್ತು ಉತ್ಪಾದನೆಯಿಂದ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗುತ್ತಿದೆ. ಇದಕ್ಕೆ ಬದಲಾಗಿ ಪ್ಲಾಸ್ಟಿಕ್‌ ಗೆ ಪರ್ಯಾಯವಾದ ವಸ್ತುಗಳನ್ನು ಬಳಸಬೇಕು ಮತ್ತು ಉತ್ಪಾದಿಸಬೇಕು. ಈ ಅಭಿಯಾನ ನಡೆಸುತ್ತಿರುವುದು ಮಾದರಿಯಾದುದು. ವಿಶ್ವವಿದ್ಯಾನಿಲಯದ ಎಲ್ಲ ವಿದ್ಯಾರ್ಥಿಗಳು ಅಭಿಯಾನಕ್ಕೆ ಕೈಜೋಡಿಸಿ ಸಹಕರಿಸಿ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಪರಿಸರ ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ  ಭಾನು ಮೋಹನ್‌, ಮಾತನಾಡಿ, ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ತದ್ವಿರುದ್ಧವಾದುದು ಇದರಿಂದ ಪರಿಸರಕ್ಕೂ ಹಾನಿ ಹಾಗೂ ಮಾನವನಿಗೂ .   ಅನಾರೋಗ್ಯವನ್ನುಂಟು ಮಾಡುವ ಹಾನಿಕಾರಕ ಅಂಶಗಳು ಅದರಲ್ಲಿರುತ್ತವೆ. ಹಾಗಾಗಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ನಾವು ಹೆಚ್ಚು ಹೆಚ್ಚು ಹೋರಾಟಗಳನ್ನು ಮಾಡಬೇಕು. ಪ್ರಕೃತಿಯ ಉಳಿವಿಗಾಗಿ ಸದಾ ದನಿ ಎತ್ತಬೇಕು ಎಂದು ತಿಳಿಸಿದರು.

ಪ್ರಾಚ್ಯವಿದ್ಯಾ ಸಂಶೋಧನಾಲಯದ ವಿಶ್ರಾಂತ ನಿರ್ದೇಶಕ ಪ್ರೊ. ಎಸ್. ಶಿವರಾಜಪ್ಪ ಮಾತನಾಡಿ, ಪ್ರತಿಭಟನೆಗಳು, ಆಂದೋಲನಗಳು ನಡೆಯುತ್ತಿದ್ದ ಸ್ಥಳದಲ್ಲಿ ಇಂತಹ ಒಂದು ಉತ್ತಮ ಕಾರ್ಯಕ್ರಮ ನಡೆಯುತ್ತಿರುವುದು ಆದರ್ಶನೀಯವಾದುದು. ಸಂಶೋಧನಾ ವಿದ್ಯಾರ್ಥಿಗಳು ಇಂತಹ ಕಾರ್ಯವನ್ನು ಕೈಗೊಂಡಿರುವುದು ಅತ್ಯಂತ ವಿಶೇಷ ಮತ್ತು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯರುಗಳಾದ ಗಪ್ಪಣ್ಣ ಮತ್ತು ಡಾ ಚೈತ್ರಾ ನಾರಾಯಣ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ, ವಿಜಯಕುಮಾರಿ ಕರಿಕಲ್, ಹಿಂದುಳಿದ ವರ್ಗಗಳ ಘಟಕದ ಸಂಯೋಜಕರಾದ ಪ್ರೊ, ಬಿ.ವಿ. ಸುರೇಶ್ ಕುಮಾರ್, ಪರಿಸರ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಶ್ರೀಕಂಠಸ್ವಾಮಿ, ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ನವಿತಾ ತಿಮ್ಮಯ್ಯ ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಹಿಂದುಳಿದ ವರ್ಗಗಳ ಸಂಶೋಧನ ವಿದ್ಯಾರ್ಥಿಗಳ ವೇದಿಕೆಯ ಸಂಶೋಧಕರು ಉಪಸ್ಥಿತರಿದ್ದರು. ಪ್ರಸನ್ನ ಕುಮಾರ್ ಚಿಕ್ಕಳ್ಳಿ ಕಾರ್ಯಕ್ರಮ ನಿರೂಪಿಸಿದರು.

Key words: Young people – join -hands – plastic free- campaign-Mysore university-VC-Prof.G. Hemanth Kumar.

ENGLISH SUMMARY….

Youth should join hands for plastic-free campaign: UoM VC
Mysuru, June 8, 2022 (www.justkannada.in): University of Mysore Vice-Chancellor Prof. G. Hemanth Kumar, today urged the youth to join hands with the plastic-free campaign.
He launched the ‘Plastic-free Gangotri Campaign’ organized as part of the World Environment Day by the University of Mysore Backward Castes Research Students Forum, held at the Manasa Gangotri campus, by planting a sapling. The program was organized with an objective of creating awareness among the students about the ill-effects of usage of plastic and imbalance caused on the environment from plastic production.
In his address, Prof. G. Hemanth Kumar said that everyone should use alternative material for plastic and also think about alternative production. “This campaign is very good. All the students should join hands in it and make it successful,” he urged.
Syndicate members Gappanna and Dr. Chaitra Narayan, Kuvempu Kannada Research Center Director Prof. Vijayakumari Karikal, Backward Castes Unit coordinator Prof. B.V. Suresh Kumar, Environmental Science Department Prof. Srikantaswamy, Economics Department Assistant Professor Dr. Navita Timmaiah and University of Mysore Backward Castes Research Students Forum Researchers were present. Prasanna Kumar Chikkalli compered.
Keywords: World Environment Day/ University of Mysore/ sapling

website developers in mysore