ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ.

ಮೈಸೂರು,ಡಿಸೆಂಬರ್,27,2021(www.justkannada.in):  ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯವಾದ ಹಿನ್ನೆಲೆ ಅಂಗಾಂಗ ದಾನ ಮಾಡಿ ಯುವಕನೊಬ್ಬ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.

ಮಂಡ್ಯ ಜಿಲ್ಲೆ ಮಳವಳ್ಳಿಯ ಶರತ್ (19) ಎಂಬ ಯುವಕ ಅಂಗಾಗ ದಾನ ಮಾಡಿ 6 ಜನರ ಬಾಳಿಗೆ ಬೆಳಕಾಗಿದ್ದಾನೆ. ಹೃದಯ, 2 ಕಿಡ್ನಿಗಳು, 1 ಯಕೃತ್ತು, 1 ಮೇದೋಜೀರಕ ಗ್ರಂಥಿ, ಕಾರ್ನಿಯಾ ದಾನ ಮಾಡಿದ್ದು, 1 ಕಿಡ್ನಿ, 1 ಯಕೃತ್ತು, ಮೇದೋಜೀರಕ ಗ್ರಂಥಿ ಅಪೋಲೊ ಆಸ್ಪತ್ರೆಗೆ, 1 ಕಿಡ್ನಿ ಬೆಂಗಳೂರಿನ ಐಎನ್ ಯುಗೆ ರವಾನೆ ಮಾಡಲಾಗಿದೆ.

ಹಾಗೆಯೇ ಹೃದಯ ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ, ಕಾರ್ನಿಯಾ ಮೈಸೂರಿನ ಕಣ್ಣಿನ ಬ್ಯಾಂಕ್‌ ಗೆ ದಾನ ಮಾಡಲಾಗಿದೆ. ಡಿಸೆಂಬರ್ 25 ರಂದು ಮಳವಳ್ಳಿ ಬಳಿ  ಶರತ್ ಗೆ ಅಪಘಾತವಾಗಿತ್ತು. ಅಪಘಾತದಲ್ಲಿ ಗಾಯಗೊಂಡು ಶರತ್ ಮಿದುಳು ನಿಷ್ಕ್ರಿಯಗೊಂಡಿತ್ತು. ಈ ಹಿನ್ನೆಲೆ ಮೈಸೂರಿನ ಅಪೋಲೋ ಆಸ್ಪತ್ರೆ ಮೂಲಕ ಅಂಗಾಗ ದಾನ ಮಾಡಲಾಗಿದೆ.

Key words: young man – donated – organ -died -accident

ENGLISH SUMMARY….

Organs of youth who succumbed in an accident, donated
Mysuru, December 27, 2021 (www.justkannada.in): Family members of youth who succumbed to an accident that took place in Mysuru are receiving widespread appreciation after they decided to donate the organs of the deceased.
The deceased is identified as Sharath (19), a resident of Mandya, who has given life to six different persons through his organs. His heart, kidneys, liver, pancreas, and cornea were donated to the Apollo Hospital in Mysuru and INU in Bengaluru.
Whereas the heart of the deceased youth was donated to the Columbia Asia Hospital in Bengaluru. The cornea was donated to the Eye Bank in Mysuru. The youth met with an accident near Malavalli in Mandya district on December 25. He was admitted to the hospital where he reportedly was declared brain dead. The family members donated the organs at the Apollo Hospital in Mysuru.
Keywords: Youth/ organs donated/ example