ಪವರ್ ಸ್ಟಾರ್ ‘ಜೇಮ್ಸ್’ ಚಿತ್ರದಲ್ಲಿ ನಟಿಸಬೇಕಾ…? ನಿಮಗೂ ಚಾನ್ಸ್ ಇದೆ !

ಬೆಂಗಳೂರು, ಜನವರಿ 10, 2019 (www.justkannada.in): ಪುನೀತ್ ರಾಜಕುಮಾರ್ ಅಭಿನಯದ   ಸಿನಿಮಾ ಇದೇ ತಿಂಗಳಾಂತ್ಯಕ್ಕೆ ಸೆಟ್ಟೇರಲಿದೆ.

ಚಿತ್ರತಂಡ ಇದಕ್ಕಾಗಿ ಭರ್ಜರಿ ತಯಾರಿಯಲ್ಲಿ ತೊಡಗಿದೆ. ಈ ನಡುವೆ ಚಿತ್ರತಂಡ ಪಾತ್ರವರ್ಗದ ಆಯ್ಕೆ ಮಾಡುತ್ತಿದ್ದು, ಹೊಸಬರಿಗೆ ಅವಕಾಶ ನೀಡಲು ನಿರ್ಧರಿಸಿದೆ.

ನಟಿಸಲು ಆಸಕ್ತಿಯಿರುವ ಮಕ್ಕಳು ಮತ್ತು ಯುವಕ-ಯುವತಿಯರಿಗೆ ಆಡಿಷನ್ ಗೆ ಕರೆ ನೀಡಿದೆ. ಆಸಕ್ತರು ನಾಲ್ಕು ಫೋಟೋ, ಒಂದು ನಿಮಿಷದ ವಿಡಿಯೋ ಕ್ಲಿಪ್ ಜತೆಗೆ 8660859361 ಎಂಬ ಮೊಬೈಲ್ ಸಂಖ್ಯೆಗೆ ವ್ಯಾಟ್ಸಪ್ ಮಾಡಬಹುದು.