ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ: ಮೈಸೂರಿನಲ್ಲಿ ಯೋಗ ಮಂಥನ ಪುಸ್ತಕ ಬಿಡುಗಡೆ…

Promotion

ಮೈಸೂರು,ಜೂ,20,2020(www.justkannada.in): ನಾಳೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ, ಮೈಸೂರಿನಲ್ಲಿ ಡಾ. ಪಿ. ಎನ್. ಗಣೇಶ್ ಕುಮಾರ್ ರವರು ಬರೆದಿರುವ ಯೋಗ ಮಂಥನ ಪುಸ್ತಕವನ್ನ ಬಿಡುಗಡೆ ಮಾಡಲಾಯಿತು.

ನಗರದ ಪತ್ರಕರ್ತರ ಭವನದಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು. ಆಧ್ಯಾತ್ಮ ಚಿಂತಕಿ ಸುಚರಿತ ಮಾತಾಜಿಯವರು ಯೋಗ ಮಂಥನ ಪುಸ್ತಕ ಬಿಡುಗಡೆ ಮಾಡಿದರು. ಈ ಪುಸ್ತಕ ಯೋಗದ ಮಹತ್ವ, ಅನುಕೂಲ ಹಾಗೂ ಯೋಗದ ವಿವಿಧ ಆಸನಗಳನ್ನು ಒಳಗೊಂಡಿದೆ. Yoga Day –mysore- Yoga Manthan- Book -release

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಯೋಗ ಪಟುಗಳು ಯೋಗದ ಹಲವು ಆಸನಗಳ ಪರಿಚಯ ಹಾಗೂ ಪ್ರದರ್ಶನ ಮಾಡಿದರು. ಲೇಖಕ ಡಾ. ಪಿ. ಎನ್. ಗಣೇಶ್ ಕುಮಾರ್, ಫೌಂಡೇಷನ್ ಕಾರ್ಯದರ್ಶಿ ಭಾಸ್ಕರ್, ಸಂಘಟನಾ ಕಾರ್ಯದರ್ಶಿ ಗೀತಾಕುಮಾರ್ ಖಜಾಂಚಿ ಸುರಭಿ ಸೇರಿದಂತೆ ಯೋಗ ಪಟುಗಳು  ಉಪಸ್ಥಿತರಿದ್ದರು.

Key words: Yoga Day –mysore- Yoga Manthan- Book -release