ನಾಳೆಯಿಂದ ಯೋಗ ದಸರಾ! ಬನ್ನಿ ಯೋಗ ಮಾಡಿ, ರೋಗದಿಂದ ಮುಕ್ತರಾಗಿ…

ಮೈಸೂರು, ಸೆಪ್ಟೆಂಬರ್ 29, 2019 (www.justkannada.in): ಯೋಗ ದಸರಾ ಸೆ.30ರಿಂದ ಅ.6ರವರಗೆ ನಡೆಯಲಿದ್ದು, ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಮಹಾರಾಜ ಓವಲ್ ಮೈದಾನದಲ್ಲಿ ಸೋಮವಾರ ಸಂಜೆ ಆರಂಭಗೊಳ್ಳಲಿದೆ.

ಅ.1ರಂದು ಮಾಧ್ಯಮ ಹಾಗೂ ಪತ್ರಿಕಾ ಪ್ರತಿನಿಧಿಗಳಿಗಾಗಿ ಯೋಗವಾಹಿನಿ, 2ರ ಬುಧವಾರ ಬೆಳಿಗ್ಗೆ 6 ಗಂಟೆಯಿಂದ 8 ಗಂಟೆವರೆಗೆ ಮೈಸೂರು ಅರಮನೆ ಆವರಣದಲ್ಲಿ ಸರ್ವ ಧರ್ಮ ಗುರುಗಳ ಸಮಕ್ಷಮದಲ್ಲಿ ಯೋಗ ಸಂಭ್ರಮ ನಡೆಯಲಿದೆ

ರಾಜ್ಯಮಟ್ಟದ ದಸರಾ ಯೋಗಾಸನ ಸ್ಪರ್ಧೆ ಸಹ ಇದೇ ದಿನ ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಮೈಸೂರು ದಸರಾ ವಸ್ತು ಪ್ರದರ್ಶನ ಆವರಣದ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ನಡೆಯಲಿದ್ದು, 1200 ಸ್ಪರ್ಧಾಳುಗಳು ಭಾಗಿಯಾಗುವರು. ಈಗಾಗಲೇ ನೋಂದಣಿ ನಡೆದಿದೆ ಎಂದು ಹೇಳಿದರು.

ಅ.4ರ ಬೆಳಿಗ್ಗೆ 6 ಗಂಟೆಗೆ ಮೈಸೂರು ಅರಮನೆ ಆವರಣದಲ್ಲಿ ಯೋಗ ಸರಪಳಿ ಆಯೋಜಿಸಿದ್ದು, 4000 ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ನಗರದ ಸ್ಪಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪೌರ ಕಾರ್ಮಿಕರಿಗಾಗಿ 5ರ ಬೆಳಿಗ್ಗೆ 8 ಗಂಟೆಗೆ ಕುವೆಂಪು ನಗರದ ಸೌಗಂಧಿಕ ಉದ್ಯಾನದಲ್ಲಿ ಸ್ವಚ್ಛ ಸರ್ವೇಕ್ಷಣಾ ಯೋಗ ಆಯೋಜಿಸಲಾಗಿದೆ.

ಅ.6ರಂದು ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರ ಯೋಗ ಬೆಳಿಗ್ಗೆ 6ರಿಂದ 8 ಗಂಟೆಯವರೆಗೆ ನಡೆಯಲಿದೆ. ಚಾಮುಂಡಿ ಬೆಟ್ಟದ ತಪ್ಪಲಿನಿಂದ ಯೋಗ ಚಾರಣ ನಡೆದರೆ, ದುರ್ಗಾ ನಮಸ್ಕಾರ ಬೆಟ್ಟದಲ್ಲಿ ನಡೆಯಲಿದೆ. ಯೋಗ ಚಾರಣದಲ್ಲಿ 1500, ದುರ್ಗಾ ನಮಸ್ಕಾರದಲ್ಲಿ 600 ಜನರು ಪಾಲ್ಗೊಳ್ಳಲಿದ್ದಾರೆ.