ಸೋಮಣ್ಣನವರಿಗೆ ಖೆಡ್ಡಾ ತೋಡಿದ ಯಡಿಯೂರಪ್ಪ, ವಿಜಯೇಂದ್ರ.

kannada t-shirts

ಬೆಂಗಳೂರು,ಮೇ,13,2023(www.justkannada.in): ಸಚಿವ ವಿ. ಸೋಮಣ್ಣ, ಬಿಜೆಪಿಯ ಅಗ್ರಗಣ್ಯ ನಾಯಕರಲೊಬ್ಬರು ಲಿಂಗಾಯತ ಸಮುದಾಯದ ಪ್ರಬಲ ನಾಯಕ ಸಹ.

ಸೋಮಣ್ಣನವರದ್ದು ವರ್ಣರಂಜಿತ ರಾಜಕೀಯ, ಮತ್ತು ವ್ಯಕ್ತಿತ್ವ. ಜನರ ಸಂಪರ್ಕದ ವಿಚಾರದಲ್ಲೂ ಎತ್ತಿದ ಕೈ. ಚುನಾವಣೆಯಲ್ಲಿ ಗೆಲುವು, ಸೋಲು ಎರಡನ್ನೂ ಉಂಡಿದ್ದಾರೆ ಸೋಮಣ್ಣ. ಬಿಜೆಪಿ ಸರ್ಕಾರದಲ್ಲಿ ವಸತಿ ಸಚಿವರಾಗಿ,  ಬೆಂಗಳೂರಿನ ಗೋವಿಂದರಾಜ ನಗರ ಪ್ರತಿನಿಧಿಸುತ್ತಿದ್ದ, ಇವರನ್ನ ಘಟಾನುಘಟಿ ಪಟ್ಟ ಕಟ್ಟಿ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ವಿರುದ್ಧ ಕಣಕ್ಕೆ‌ ದೂಡಲಾಯಿತು.

ತಮಗೂ ತಮ್ಮ ಪುತ್ರ ಅರಣ ಸೋಮಣ್ಣನವರಿಗೆ ಟಿಕೆಟ್ ಬೇಡಿಕೆ ಇಟ್ಟಿದ್ದ ಸೊಮಣ್ಣನವರಿಗೆ ಎರಡು ಕ್ಷೇತ್ರ ನೀಡಿ ಉಪ್ಪಾರ ಸಮುದಾಯದ ಪುಟ್ಟರಂಗಶೆಟ್ಟಿ ವಿರುದ್ಧ ಚಾಮರಾಜನಗರದಲ್ಲಿ ಸ್ಪರ್ದಿಸಲು ಕಮಲ ಪಕ್ಷ ಹೇಳಿತು.

ವರುಣಾ ಮತ್ತು ಚಾಮರಾಜನಗರ ಲಿಂಗಾಯತ ಪ್ರಾಬಲ್ಯವನ್ನು ಹೊಂದಿವೆ.  ತಮ್ಮ ಗೆಲುವು ಸುಲಭ ಎಂದು ಸೋಮಣ್ಣ ಬಹುಶಃ ಭಾವಿಸರಬಹುದು. ಆದರೆ ಇಲ್ಲೆ ಇರುವುದು ರಾಜಕೀಯ. ಬೆಂಗಳೂರಿಂದ ಸೋಮಣ್ಣ ಎತ್ತಂಗಡಿ ಆದುದಕ್ಕೆ ರಾಜಕೀಯ ಪಿತೂರಿಯ ಕಾರಣವಿದೆ ಎಂಬ ಗುಮಾನಿ ಇದೆ. ಇದರ ಹಿಂದೆ, ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಅವರ ಕೈವಾಡವಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಗುಸುಗುಸು.

ಇದು ನಿಜವೇ ಆಗಿದ್ದಲ್ಲಿ ಯಡಿಯೂರಪ್ಪ ಮತ್ತವರ ಪುತ್ರ ವಿಜಯೇಂದ್ರ ಗೆದ್ದಂತಾಯಿತು, ಸೋಮಣ್ಣ ವರಣಾ ಹಾಗೂ ಚಾಮರಾಜನಗರ ಎರಡೂ ಕ್ಷೇತ್ರಗಳಲ್ಲಿ ಪರಾಭವ ಗೊಂಡಿದ್ದಾರೆ.

M.SIDDARAJU, SENIOR JOURNALIST

 

ಎಂ.ಸಿದ್ಧರಾಜು

ಹಿರಿಯ ಪತ್ರಕರ್ತರು.

ಬೆಂಗಳೂರು. 

 

Key words: Yediyurappa-Vijayendra-V.Somanna-Varuna-chamarajanagar

website developers in mysore