ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ನಿರ್ದೇಶಕಿ ಜತೆ ಯಶ್ ಮುಂದಿನ ಸಿನಿಮಾ?!

Promotion

ಬೆಂಗಳೂರು, ಸೆಪ್ಟೆಂಬರ್ 28, 2023 (www.justkannada.in): ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ನಿರ್ದೇಶಕಿ ಗೀತು ಮೋಹನ್​ ದಾಸ್​ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ ಎಂಬ ಸುದ್ದಿ ಹರಡಿದೆ.

‘ಲೈಯರ್ಸ್ ಡೈಸ್’ ಚಿತ್ರಕ್ಕಾಗಿ ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿರುವ ಗೀತು ಅವರ ಸ್ಕ್ರಿಪ್ಟ್​ ಯಶ್​ ಅವರಿಗೆ ಇಷ್ಟವಾಗಿದೆ ಎನ್ನಲಾಗಿದೆ. ಆದರೆ ಈ ಸುದ್ದಿ ಅಧಿಕೃತವಾಗಿ ಘೋಷಣೆಯಾಗಬೇಕಿದೆ.

ಅಂದಹಾಗೆ ಪ್ರಸ್ತುತ ಯಶ್ ಹಾಗೂ ಅವರ ತಂಡ ಲಂಡನ್ ನಲ್ಲಿದ್ದು, ಹಾಲಿವುಡ್ನ ಖ್ಯಾತ ಸಾಹಸ ನಿರ್ದೇಶಕ ಹಾಗೂ ಮಾರ್ಷಲ್ ಆರ್ಟಿಸ್ಟ್ ಮತ್ತು ಹಾಲಿವುಡ್ ಆಕ್ಷನ್ ಸಿನಿಮಾಗಳ ನಿರ್ದೇಶಕ ಜೆಜೆ ಪೆರ್ರಿ ಅವರನ್ನು ಭೇಟಿಯಾಗಿದ್ದಾರೆ.

ಲಂಡನ್ ಅಷ್ಟೇ ಅಲ್ಲದೆ ಯಶ್ ಪ್ರಿ-ಪ್ರೊಡಕ್ಷನ್ ಗಾಗಿ ಶ್ರಿಲಂಕಾಗೂ ಭೇಟಿ ನೀಡಿದ್ದಾರೆ. ಚಿತ್ರದ ಚಿತ್ರೀಕರಣ ನವೆಂಬರ್ ನಲ್ಲಿ ಪ್ರಾರಂಭವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.