ನರ್ತನ್ ಜೊತೆ ಪ್ಯಾನ್ ಇಂಡಿಯಾ ಸಿನಿಮಾ ಯಶ್ ರೆಡಿ !

kannada t-shirts

ಬೆಂಗಳೂರು, ಜೂನ್ 20, 2020 (www.justkannada.in): ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೇ ರಾಕಿಂಗ್ ಸ್ಟಾರ್ ಯಶ್ ಪ್ಲಾನ್ ಮಾಡುತ್ತಿದ್ದಾರೆ.

ಯಶ್ ತಮ್ಮ ಸಿನಿಮಾಗೆ ಕನ್ನಡದ ನವ ಹಾಗೂ ಪ್ರತಿಭಾನ್ವಿತ ನಿರ್ದೇಶಕ ನರ್ತನ್ ಕಥೆಯನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಈ ಮೂಲಕ ದೇಸಿ ಪ್ರತಿಭೆಯನ್ನ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಮಿಂಚಿಸಲಿದ್ದಾರೆ.

ಕೆಜಿಎಫ್ 2 ನಂತರ ನಿರ್ದೇಶಕ ನರ್ತನ್​ ಮತ್ತು ರಾಖೀ ಭಾಯ್​ ಕಾಂಬಿನೇಷನ್​ನ ಚಿತ್ರ ಕನ್ಫರ್ಮ್​ ಆಗಿದೆ.
ಈಗ ಸ್ಕ್ರಿಪ್ಟ್ ಮಾಡಿಕೊಂಡಿರೋ ನರ್ತನ್ ಯಶ್ ಜೊತೆಯಲ್ಲಿ ಕಥೆಯ ಬಗ್ಗೆ ಚರ್ಚೆ ಮಾಡ್ತಿದ್ದಾರಂತೆ. ಆದಷ್ಟು ಬೇಗ ಸ್ಕ್ರಿಪ್ಟ್ ಓಕೆ ಮಾಡಿ ಪ್ರೀ ಪ್ರೊಡಕ್ಷನ್ ಪ್ಲಾನ್ ಮಾಡಲಿದ್ದಾರಂತೆ.

ಇನ್ನು ಕೆಜಿಎಫ್​ 2 ಇನ್ನು 20ರಿಂದ 25 ದಿನಗಳ ಚಿತ್ರೀಕರಣವಷ್ಟೇ ಬಾಕಿಯಿದೆ. ಎಲ್ಲಾ ಅಂದುಕೊಂಡಂತೆ ಆದರೆ ಅಕ್ಟೊಬರ್ 23ಕ್ಕೆ ಸಿನಿಮಾ ತೆರೆಕಾಣೋದು ಕನ್ಫರ್ಮ್ ಆಗಿದೆ.

website developers in mysore