ಯಶ್ ಮುಂದಿನ ಚಿತ್ರದ ಪೋಸ್ಟರ್ ಲೀಕ್! ರಾಕಿ ಭಾಯ್ ಲುಕ್’ಗೆ ಫ್ಯಾನ್ಸ್ ಫಿದಾ

Promotion

ಬೆಂಗಳೂರು, ಆಗಸ್ಟ್ 18, 2022 (www.justkannada.in): ಯಶ್​ 19ನೇ ಚಿತ್ರದ ಪೋಸ್ಟರ್ ಲೀಕ್ ಆಗಿದ್ದು, ರಾಕಿ ಭಾಯ್​ ಹೊಸ ಸ್ಟೈಲ್​ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಅಂದಹಾಗೆ ಕೆಜಿಎಫ್​ 2 ಚಿತ್ರದ ಮೂಲಕ ಪ್ಯಾನ ಇಂಡಿಯಾ ಸ್ಟಾರ್ ಆಗಿರೋ ಯಶ್​ ಮುಂದಿನ ಚಿತ್ರಕ್ಕೆ ಇಡೀ ಇಂಡಿಯಾನೇ ಕಾಯುತ್ತಿದೆ. ಹೀಗಾಗಿ ಯಶ್​ ಮುಂದಿನ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ.

19ನೇ ಚಿತ್ರದ ಪೋಸ್ಟರ್ ಲೀಕ್ ಆಗಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಪೋಸ್ಟರ್​ನಲ್ಲಿ ಯಶ್​ ತುಂಬಾ ಡಿಫರೆಂಟ್​ ಆಗಿಯೇ ಕಾಣ್ತಿದ್ದಾರೆ.

ಇನ್ನು ಉದ್ದ ಕೂದಲು ಬಿಟ್ಟು, ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್‌ ಕಂಡು ಯಶ್ ಅಭಿಮಾನಿಗಳು ಖುಷ್ ಆಗಿದ್ದಾರೆ,

KGF 2 50 ದಿಗಳ ಕಂಪ್ಲೀಟ್ ಮಾಡಿದ ಶುಭ ದಿನವಾದ ಜೂನ್ 2 ರಂದು ಯಶ್ 19 ನೇ ಸಿನಿಮಾ ಅಧಿಕೃತವಾಗಿ ಅನೌನ್ಸ್ ಆಗೋದು ಪಕ್ಕಾ ಆಗಿದೆ.