ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ ಗ್ರಾಮೀಣ ಯುವಕ….

ಯಾದಗಿರಿ, ಮಾರ್ಚ್,30,2021(www.justkannada.in): ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಗಳನ್ನು (ಯುಪಿಎಸ್‌ಸಿ) ಬರೆಯಲು ಅನೇಕರಿಗೆ ಆಕಾಂಕ್ಷೆಯಿದ್ದರೂ ಸಹ ಅದು ಕಷ್ಟ ಅನ್ನೋ ಕಾರಣಕ್ಕಾಗಿಯೋ, ಅಥವಾ ಕೈಗೆಟಕುವಂತದ್ದಲ್ಲ ಅನ್ನೋ ಕಾರಣಕ್ಕಾಗಿಯೋ ಅನೇಕ ಯುವಜನರು ಪರೀಕ್ಷೆಗಳನ್ನು ಬರೆಯಲು ಹಿಂಜರಿಯುತ್ತಾರೆ. ಅದರಲ್ಲಿಯೂ ವಿಶೇಷವಾಗಿ ಗ್ರಾಮೀಣ ಭಾಗದ ಯುವಜನರು ಈ ಪರೀಕ್ಷೆಗಳಿಂದ ಇಂದಿಗೂ ದೂರವೇ ಉಳಿದಿದ್ದಾರೆ. ಆದರೆ ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆಯ, ವಡಗೆರಾ ತಾಲ್ಲೂಕಿನ ಹಳಗೆರ ಗ್ರಾಮದ 24 ವರ್ಷ ವಯಸ್ಸಿನ ಅರುಣ್ ಕುಮಾರ್, ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಯನ್ನು ಎದುರಿಸಿ ಉತ್ತೀರ್ಣರಾಗುವ ಮೂಲಕ ತಮ್ಮಂತಹ ಇತರೆ ನೂರಾರು ಯುವಜನರಿಗೆ ಮಾದರಿಯಾಗಿದ್ದಾರೆ.Government,Social,Economic,Educational,survey,Report,Should,receive,Former CM,Siddaramaiah 

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅರುಣ್ ಕುಮಾರ್, ಯಾದಗಿರಿ ಜಿಲ್ಲೆಯ ಹಳಗೆರಾ ಹಾಗೂ ಬೆಂಡೆಬೆಂಬಳ್ಳಿಯಂತಹ ಗ್ರಾಮಗಳಲ್ಲಿ 1ರಿಂದ 10ನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ಕಲಿತರು. ನಂತರ ಪಿಯುಸಿಯನ್ನು ಕಲಬುರಗಿಯ ಶ್ರೀ ಗುರು ವಿದ್ಯಾಪೀಠದಲ್ಲಿ ಪೂರ್ಣಗೊಳಿಸಿ, ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಟೆಕ್ನಾಲಜಿ ಪದವಿಯನ್ನು ಗಳಿಸಿದರು. ಇವರು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳ ಪ್ರಾಥಮಿಕ ತರಬೇತಿಯನ್ನು ಬೆಂಗಳೂರಿನ ಉಜ್ವಲಾ ಅಕಾಡೆಮಿಯಲ್ಲಿ ಪಡೆದು, ದೆಹಲಿಯ ವಜಿರಾವ್ ಹಾಗೂ ರೆಡ್ಡಿ ಇನ್ಸ್ಟಿಟ್ಯೂಟ್‌ನಲ್ಲಿ ಒಂದು ವರ್ಷದ ಕೋರ್ಸ್ ಅನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದರು. ಅರುಣ್ ಕುಮಾರ್ ತಮ್ಮ ಸ್ವಸಾಮರ್ಥ್ಯ ಹಾಗೂ ಕಠಿಣ ಪರಿಶ್ರಮದಿಂದಾಗಿ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಮೊದಲ ಬಾರಿಗೆ ಯಶಸ್ಸನ್ನು ಸಾಧಿಸಿ, ಉತ್ತೀರ್ಣರಾದವರ ಪಟ್ಟಿಯಲ್ಲಿ ೩೨೪ನೇ ಶ್ರೇಯಾಂಕವನ್ನು ಪಡೆದುಕೊಂಡಿದ್ದು, ಪ್ರಸ್ತುತ ಮೌಖಿಕ ಸಂದರ್ಶನಕ್ಕೆ ತಯಾರಿ ನಡೆಸುತ್ತಿದ್ದಾರೆ.

“ನಿಂಗನಗೌಡ ಹಾಗೂ ಮಲ್ಲಪ್ಪ ಎಂಬ ನನ್ನ ಪ್ರೌಢಶಾಲೆಯ ಇಬ್ಬರು ಶಿಕ್ಷಕರೇ ನನಗೆ ಪ್ರೇರಣೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನಕ್ಕೆ ಯಶಸ್ಸು ದೊರೆತಿರುವುದು ನನಗೆ ಬಹಳ ಸಂತಸ ತಂದಿದೆ,” ಎನ್ನುತ್ತಾರೆ ಅರುಣ್.

ಬಹುಶಃ ಅರುಣ್ ಗೋದಿಹಾಳ್ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿರುವ ಯಾದಗಿರಿ ಜಿಲ್ಲೆಯ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿಯಾಗಿ ಜನರ ಸೇವೆ ಸಲ್ಲಿಸಬೇಕೆಂಬುದು ಅವರ ಮನದಾಸೆಯಾಗಿದೆ.yadgir- Rural -young man – Arun kumar-passed -UPSC exam.

ಇವರ ತಂದೆ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದು, ಮಗನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ನಮಗೆ ನಮ್ಮ ಮಗನ ಬಗ್ಗೆ ಮೊದಲಿನಿಂದಲೂ ಅತ್ಯಂತ ಕಠಿಣ ಎಂದು ಪರಿಗಣಿಸಲ್ಪಟ್ಟಿರುವ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗುತ್ತಾನೆ ಎಂದು ತುಂಬಾ ವಿಶ್ವಾಸವಿತ್ತು,” ಎಂದರು.

“ಕಠಿಣ ಅಭ್ಯಾಸ ಹಾಗೂ ಓದಿನಲ್ಲಿ ಏಕಾಗ್ರತೆಯೇ ನನ್ನ ಯಶಸ್ಸಿಗೆ ಕಾರಣ. ಈ ಎರಡು ಗುಣಗಳಿಂದ ಯಾರು ಬೇಕಾದರೂ ಯುಪಿಎಸ್‌ಸಿ ಪರೀಕ್ಷೆಯನ್ನು ಪೂರ್ಣಗೊಳಿಸಬಹುದು. ಆದರೆ ಅದಕ್ಕಾಗಿ ಕನಿಷ್ಠ ಪ್ರತಿ ದಿನ ಆರರಿಂದ ಎಂಟು ಗಂಟೆಗಳ ಕಾಲ ಅಭ್ಯಾಸದ ಅಗತ್ಯವಿದೆ. ನನ್ನ ಸಾಧನೆಗಾಗಿ ನನ್ನ ಪೋಷಕರಿಗೆ, ಬೋಧಕರಿಗೆ ಹಾಗೂ ತರಬೇತುದಾರರಿಗೆ ಮತ್ತು ನನ್ನನ್ನು ಬೆಂಬಲಿಸಿದ ನನ್ನ ಎಲ್ಲಾ ಸ್ನೇಹಿತರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ,” ಎನ್ನುತ್ತಾರೆ ಭಾವಿ ಜಿಲ್ಲಾಧಿಕಾರಿ ಅರುಣ್.

Key words: yadgir- Rural -young man – Arun kumar-passed -UPSC exam.